ಮಂತ್ರಾಲಯ ಶ್ರೀಗಳಿಂದ ಶಿಷ್ಯರಿಗೆ ಮುದ್ರಾಧಾರಣೆ
ಸಂಜೆವಾಣಿ ವಾರ್ತೆ
ಹೊಸಪೇಟೆ ೨೭: ಸ್ಥಳೀಯ ರಾಣಿಪೇಟೆ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಚಾರ್ತುಮಾಸ್ಯ ನಿಮಿತ್ತ ಮಂತ್ರಾಲಯ ಮಠದ ಶ್ರಿಸುಬುಧೇಂದ್ರ ತೀರ್ಥ ಸ್ವಾಮೀಜಿ ಮುದ್ರಾಧಾರಣೆ ನೆರವೇರಿಸಿದರು.
ಶ್ರೀಮಠಕ್ಕೆ ಬೆಳಿಗ್ಗೆ ಆಗಮಿಸಿದ ಶ್ರೀಗಳು ರಾಯರ ವೃಂದಾವನಕ್ಕೆ ಆರತಿ ಬೆಳಗಿದರು. ಬಳಿಕ ಶ್ರೀಮಠಕ್ಕೆ ಆಗಮಿಸಿದ ನೂರಾರು ಶ್ರೀಮಠದ ಶಿಷ್ಯರಿಗೆ, ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿ ಫಲ ಮಂತ್ರಾಕ್ಷತೆ ನೀಡಿದರು.
ಶ್ರೀಮಠದ ಶಿಷ್ಯ ಸಂಪರ್ಕಧಿಕಾರಿ ಡಾ.ವಾದಿರಾಜ್ ಆಚಾರ್ಯ, ಡಿವಿಜಿನಲ್ ಮ್ಯಾನೇಜರ್ ಗುರುರಾಜ್ ದಿಗ್ಗಾವಿ, ವ್ಯವಸ್ಥಾಪಕರಾದ ಟೀಕಾಚಾರ್ಯ ಗುಂಜಳ್ಳಿ, ಕೃಷ್ಣಮೂರ್ತಿ, ವಿಚಾರಣಕರ್ತ ನರಸಿಂಹಮೂರ್ತಿ, ಮಠಾಧಿಕಾರಿ ಭೀಮಸೇನಾಚಾರ್ಯ, ಪವನ್ ಆಚಾರ್ಯ, ತಿರುಮಲೇಶ್, ದಾಸಸಾಹಿತ್ಯ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರ ಪಾಲ್ಗೊಂಡಿದ್ದರು.