ತುಂಗಭದ್ರೆ : ರಮಣೀಯ ನೋಟ! ಮುಳುಗಡೆಯಾದ ಹಂಪಿಯ ಸ್ಮಾರಕಗಳು
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ : ತುಂಗಭದ್ರಾ ಜಲಾಶಯದಿಂದ ಶುಕ್ರವಾರ ೧ ಲಕ್ಷ ೬ ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಪುರಂದರದಾಸರ ಮಂಟಪ ಸಂಪರ‍್ಣ ಮುಳುಗಡೆಯಾಗಿದ್ದು ಸೇರಿದಂತೆ ಒಂದಡೆ ಭೋರ್ಗರೆಯುವ ನೀರಿನ ರಮಣೀಯವಾಗಿ ಘೋಚರಿಸಿದರೆ, ಹಂಪಿಯ ಐತಿಹಾಸಿಕ ಹಂಪಿಯ ಸ್ಮಾರಕಗಳ ಮುಳುಗಡೆ ಸೇರಿದಂತೆ ಹಂಪಿಯಲ್ಲಿ ನಡೆಯುವ ಧಾರ್ಮಿಕ ಕರ್ಮಕ್ರಿಯೆಗಳಿಗೂ ಅಡ್ಡಿಯಾಗಿದೆ. ಕೆಲ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ.
ಜಲಾಶಯದ ೩೨ ಗೇಟ್‌ಗಳಿಂದ ಹಾಗೂ ಕಾಲುವೆಗಳ ಮೂಲಕ  ೧,೧೭,೫೭೧ ಕ್ಯುಸೆಕ್‌ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಧರ‍್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಪುರಂದರದಾಸರ ಮಂಟಪ, ಕಾಲು ಸೇತುವೆ ಸಂಪರ‍್ಣ ಮುಳುಗಡೆಯಾಗಿವೆ. ಇನ್ನೂ ಚಕ್ರತರ‍್ಥ ಬಳಿಯ ಕಂಪಭೂಪ ಮರ‍್ಗ ಸಂಪರ‍್ಣ ಬಂದ್ ಆಗಿದ್ದು, ಶ್ರೀಕೋದಂಡರಾಮಸ್ವಾಮಿ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಾಲಯಕ್ಕೆ ತೆರಳಲು ಮರ‍್ಗ ಇಲ್ಲದಾಗಿದೆ. ಈ ದೇವಾಲಯಗಳಿಗೆ ತೆರಳಲು ಅಚ್ಯುತರಾಯ ದೇವಾಲಯದ ಮರ‍್ಗ ಬಳಸಿ ಭಕ್ತರು ಬರುತ್ತಿದ್ದಾರೆ.
ಹಂಪಿಯ ಕಂಪಭೂಪ ಮರ‍್ಗ ಬಂದ್‌ ಆಗಿರುವುದರಿಂದ ಚಕ್ರತರ‍್ಥ ಪ್ರದೇಶದಿಂದ ತೆರಳುತ್ತಿದ್ದ ಪ್ರವಾಸಿಗರು ಈಗ ಅಚ್ಯುತರಾಯ ದೇವಾಲಯದ ಮರ‍್ಗ ಬಳಸಿ, ಗುಡ್ಡ ಏರಿ ಪುರಂದರ ದಾಸರ ಮಂಟಪ, ಕಾಲು ಸೇತುವೆ ಹಾಗೂ ವಿಜಯ ವಿಠ್ಠಲ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯಗಳ ವೀಕ್ಷಣೆಗೆ ತೆರಳುತ್ತಿದ್ದಾರೆ. ಇನ್ನೂ ಕೋದಂಡರಾಮಸ್ವಾಮಿ ದೇವಾಲಯದ ಬಳಿಯ ಮಂಟಪಗಳು ಕೂಡ ಜಲಾವೃತವಾಗಿವೆ. ಹಂಪಿಗೆ ಇನ್ನೂ ಭಾರೀ ಪ್ರಮಾಣದ ನೀರು ಬಿಟ್ಟರೆ, ಚಕ್ರತರ‍್ಥ ಪ್ರದೇಶದವರೆಗೆ ನೀರು ಬರಲಿದೆ. ಸಾಲು ಮಂಟಪದವರೆಗೂ ನೀರು ಬರುವ ಸಾಧ್ಯತೆ ಇದ್ದು, ಸಾಲುಮಂಟಪದಲ್ಲಿರುವ ಪೊಲೀಸ್‌ ಠಾಣೆ, ವಸ್ತುಸಂಗ್ರಹಾಲಯ ಕೂಡ ಜಲಾವೃತವಾಗುವ ಸಾಧ್ಯತೆ ಇದೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಬಳಿಯ ತುಂಗಭದ್ರಾ ನದಿಯಿಂದ ವಿರೂಪಾಪುರ ಗಡ್ಡೆ ಭಾಗದ ಕಡೆಗೆ ತೆರಳಲು ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈಗ ಜಲಾಶಯದಿಂದ ೧ಲಕ್ಷ ೭ ಸಾವಿರ ಕ್ಯುಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕೂಡ ಸ್ಥಗಿತಗೊಳಿಸಲಾಗಿದೆ. ತಳವಾರಘಟ್ಟ ಸೇತುವೆಯಿಂದ ಆನೆಗೊಂದಿ, ಅಂಜನಾದ್ರಿ ಬೆಟ್ಟಕ್ಕೆ ಸರ‍್ಪ ಕಲ್ಪಿಸುತ್ತಿದ್ದ ಬೋಟಿಂಗ್‌ ಸೇವೆ ಸ್ಥಗಿತಗೊಂಡಿದೆ. ಹಂಪಿಯ ಚಕ್ರತರ‍್ಥದ ಬಳಿ ಹರಿಗೋಲು ಕೂಡ ಬಂದ್ ಮಾಡಲಾಗಿದೆ.  ಹಂಪಿಯ ಕಂಪಭೂಪ ಮರ‍್ಗ ಬಂದ್ ಆಗಿದ್ದರೂ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪೂಜಾ ಕರ‍್ಯ ಸ್ಥಗಿತಗೊಳಿಸಲಾಗಿಲ್ಲ. ಪುರೋಹಿತರು ಅಚ್ಯುತರಾಯ ದೇವಾಲಯ ಮರ‍್ಗ ಬಳಸಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಚಕ್ರತರ‍್ಥ ಪ್ರದೇಶದ ಋಷಿ ಮಂಟಪ, ಕೋಟಿಲಿಂಗ, ವಿಷ್ಣು ಮಂಟಪ, ಲಕ್ಷ್ಮೀ ನರಸಿಂಹ ಮಂಟಪ ಸೇರಿದಂತೆ ವಿವಿಧ ಮಂಟಪಗಳು ಜಲಾವೃತವಾಗಿವೆ.
ತುಂಗಭದ್ರಾ ಜಲಾಶಯದ ಮಟ್ಟ ೧೬೩೩ ಅಡಿ ಇದ್ದು, ಸದ್ಯ ೧೬೩೧.೬೮ ಅಡಿಯವರೆಗೆ ನೀರು ಬಂದಿದೆ. ೧೦೦.೫೨೩ ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಂಗ್ರಹ ಸಾರ‍್ಥ್ಯ ೧೦೫.೭೮೮ ಟಿಎಂಸಿ ಇದ್ದು, ಜಲಾಶಯದ ಒಳ ಹರಿವು ಕೂಡ ಭಾರೀ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ನದಿಗೆ ಭಾರೀ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಈಗಾಗಲೇ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನೂ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ. ಜಲಾಶಯದಿಂದ ಬಿಟ್ಟಿರುವ ನೀರು ಮಂತ್ರಾಲಯ ಮರ‍್ಗವಾಗಿ ಶ್ರೀಶೈಲಂ ನದಿಯ ಮೂಲಕ ಸಮುದ್ರ ಸೇರುತ್ತದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಹೊರಬಿಡಲಾಗುವುದು ಎಂದು ಈಗಾಗಲೇ ನದಿಪಾತ್ರದ ಜನರಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.