ಹಬೋಹಳ್ಳಿ : ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಹೃದ್ರೋಗ ತಪಾಸಣಾ ಶಿಬಿರ
ಸಂಜೆವಾಣಿ ವಾರ್ತೆ
 ಹಗರಿಬೊಪ್ಪನಹಳ್ಳಿ. ಜು.27 ಪಟ್ಟಣದ ಮಾಜಿ ಶಾಸಕ ಸಿರಾಜ್ ಶೇಖ್ ಪುತ್ರ ಹಾಗೂ ನೋಬೆಲ್ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ  ಹಫೀಜ್ ಶೇಕ್ ಹುಟ್ಟು ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು .
 ಕಾರ್ಯಕ್ರಮವನ್ನು ಮಾಜಿ ಶಾಸಕ ಸಿರಾಜ್ ಶೇಕ್   ಉದ್ಘಾಟಿಸಿ ಮಾತನಾಡಿ ಜನರಿಗೆ ಒಳ್ಳೆಯ ಕೆಲಸ ಮಾಡುವ ಮೂಲಕ ಮಾದರಿಯಾಗಿರಬೇಕು. ಕೋಟಿ  ಕೋಟಿ ಹಣವಿದ್ದರೂ ಸಾಲದು ಸೇವೆ ಮಾಡಲು ಒಳ್ಳೆಯ ಮನಸ್ಸಿರಬೇಕು. ಆ ಮನಸ್ಸು ದೇವರು ನನ್ನ ಮಗ ಹಫಿಜ್ ಗೆ ನೀಡಲಿ. ಇನ್ನೊಬ್ಬ ನನ್ನ ಪುತ್ರ ಮದುವೆಯನ್ನು ಜನವರಿ 12ರಂದು ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳುಲಾಗುವುದು   ಎಂದರು.
 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಥಳೀಯ ವೈದ್ಯ  ಡಾ. ಎಎಂಎ ಕರಿಬಸಯ್ಯ ಮಾತನಾಡಿ ಜನರು ಕಾಯಿಲೆ ಬರದಂತೆ ಜಾಗೃತಿ  ವಹಿಸುವುದು ಒಳ್ಳೆಯದು. ಕಾಯಿಲೆ ಬಂದ ಮೇಲೆ ಆಸ್ಪತ್ರೆ ಹಣ ಖರ್ಚುನಿಂದ ಮತ್ತಷ್ಟು ಕುಗ್ಗಿ ಹೋಗುತ್ತಾರೆ.. ಹೃದಯ ತಪಾಸಣೆಯಿಂದ ಮುಂಜಾಗ್ರತೆ ವಹಿಸಿದರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಆರೋಗ್ಯವಾಗಿರಬೇಕೆಂದರೆ ದಿನಾಲು ಮಿತವಾಗಿ ಆಹಾರ ಲಘು ವ್ಯಾಯಾಮ, ಯೋಗ ಜೊತೆಗೆ ಎಲ್ಲರನ್ನೂ ಪ್ರೀತಿಸುವ ಮನೋಭಾವ ಇದ್ದರೆ ಯಾವುದೇ ಖಾಯಿಲೆಗಳು ಬರುವುದಿಲ್ಲ. ಆರೋಗ್ಯ ಎನ್ನುವುದು ಒಂದು ತಪಸ್ಸು. ಅದನ್ನು ಪಡೆದುಕೊಳ್ಳುವ ಮೂಲಕ ಎಲ್ಲರೂ ಆರೋಗ್ಯವಾಗಿರಬೇಕು ಎಂದರು.
 ಆರಂಭದಲ್ಲಿ ಪ್ರಸ್ತಾವಿಕವಾಗಿ  ಹಫಿಜ್ ಶೇಕ್ ಮಾತನಾಡಿ ಸಮಾಜ ಸೇವೆ ಮಾಡಲು ನಮ್ಮ ತಂದೆಯವರ ಆಶೀರ್ವಾದ ನನ್ನ ಮೇಲಿದೆ. ಪ್ರೀತಿ ವಿಶ್ವಾಸದಿಂದ ನನ್ನ ಕೈಯಲ್ಲಿ ಆದಷ್ಟು  ನಾನು ಸಮಾಜ ಸೇವೆ ಮಾಡಬೇಕೆಂದು ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ಕಾಡುತ್ತಿತ್ತು. ಜೊತೆಗೆ ತಂದೆಯವರ ಮಾರ್ಗದರ್ಶನ ನನ್ನ ಮೇಲಿರುವಾಗ ನಾನು ಜೀವ ಇರೋವರೆಗೂ  ಜನರ ಸೇವೆಗೆ ಕಂಕಣಬದ್ಧನಾಗಿರುತ್ತೇನೆ ಎಂದರು
 ಕಾರ್ಯಕ್ರಮದ ಸಾನಿಧ್ಯವನ್ನು ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ವಹಿಸಿದ್ದರು .
 ಈ ಸಂದರ್ಭದಲ್ಲಿಜಿ ಪಂ ಮಾಜಿ ಸದಸ್ಯ ಗಾದಿಗನೂರು ಹಾಲಪ್ಪ, ಭಾರತೀಯ ವೈದ್ಯಕೀಯ ಸಂಘದ ತಾಲೂಕ  ಅಧ್ಯಕ್ಷ l ಡಾ ಮನೋಜ್,, ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್  ಎಸ್ ಎಸ್ ಆಸ್ಪತ್ರೆಯ ಸಿಬ್ಬಂದಿ  ಇದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ಬ್ಯಾಲಾಳ್  ಗವಿಸಿದ್ದಪ್ಪ ನಿರ್ವಹಿಸಿದರು. ಪ್ರಾರ್ಥನೆ ರೇವಣಸಿದ್ದ ಆಚಾರಿ ಮತ್ತು ವಿದ್ಯಾರ್ಥಿಗಳು ಮಾಡಿದರು.