ವಿದೇಶಿ ವಿದ್ಯಾರ್ಥಿಗಳು ಇಲ್ಲಿಗೆ ಬರುವಂತಾಗಬೇಕು: ನಿರ್ಭಯಾನಂದ ಸರಸ್ವತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಮುಂದಿನ‌ ದಿನಗಳಲ್ಲಿ ಈ ವಿವಿ ಶ್ರೇಷ್ಟವಾಗಲಿದೆ. 15 ವರ್ಷಕ್ಕೆ ಕಾಲಿಟ್ಟುರುವ ಈ ವಿವಿ ಮುಂದಿನ‌ ಹತ್ತು ವರ್ಷ ಗಳಲ್ಲಿ ವಿದೇಶಗಳಿಂದ ವಿದ್ಯಾರ್ಥಿಗಳು ಈ ವಿವಿಗೆ ಬರುವಂತೆ ಆಗಬೇಕು ಎಂದು ಗದಗನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ‌ ನಿರ್ಭಾಯಾನಂದ ಸರಸ್ವತಿ ಅವರು ಆಶಿಸಿದ್ದಾರೆ.
ಅವರಿಂದ ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ 15 ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಿವಿಧ ಕಟ್ಟಡಗಳನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಪ್ರಾಚೀನದ್ದಾಗಲಿ, ಇಲ್ಲಾ ಪಾಶ್ಚಿಮಾತ್ಯ ಶಿಕ್ಷಣ ಪದ್ದತಿಯನ್ನು ಸಮರ್ಪಕವಾಗಿ ಅನುಸರಿಸದೇ ನಮ್ಮ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ನಮ್ಮಲ್ಲಿ‌ಮೊದಲು ನೈತಿಕ ಶಿಕ್ಷಣ ಮುಖ್ಯವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಜೆ.ತಿಪ್ಪೆರುದ್ರಪ್ಪ ಅವರು ವಿವಿಯ ಅಭಿವೃದ್ಧಿ ಬಗ್ಗೆ ತಿಳಿಸಿದರು.
ಕೊರತೆ ಇಲ್ಲದ:
ಕುಲಸಚಿವ  ಎಸ್.ಎನ್.ರುದ್ರೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 94 ಎಕರೆ ಪ್ರದೇಶದಲ್ಲಿ
3 ಸಾವಿರದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಹಣಕಾಸಿನ ಸಮಸ್ತೆ ಇಲ್ಲ ನಮ್ಮಲ್ಲಿ 101ಕೋಟಿರೂ ಇದೆ. ಬರುವ ಎರೆಡು ವರ್ಷದಲ್ಲಿ ಯಾವುದೇ ಕೊರತೆ ಇಲ್ಲದ ವಿವಿಯಾಗಲಿದೆಂದು ಹೇಳಿದರು.
ಸಮಾರಂಭದಲ್ಲಿ  ಅಕ್ಕಮಹದೇವಿ ವಿಯಯ ಕುಲಪತಿ ಪ್ರೊ. ತುಳಿಸಿ‌ಮಾಲ ಬಿ.ಕೆ, ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಬಿ.ಕೆ.ರವಿ, ಜನಪದ ವಿವಿಯ ಕುಲಪತಿ ಪ್ರೊ.ಭಾಸ್ಕರ್ ಟಿ.ಎಂ.
ವೇದಿಕೆಯಲ್ಲಿ ಕುಲಸಚಿವರಾಗಿದ್ದ ಎಸ್.ಸಿ.ಪಾಟೀಲ್, ಎಸ್.ಎ.ಪಾಟೀಲ್, ಎ.ವಿ.ಪ್ರಸಾದ್, ಶಶಿಕಾಂತ್ ಉಡಕೇರಿ, ರಮೇಶ್ ಕೆ. ರಮೇಶ್ ಓಲೇಕಾರ್ ಹಣಕಾಸು ಅಧಿಕಾರಿ ನಾಗರಾಜ್,
 ಸಿಂಡಿಕೇಟ್ ಸದಸ್ಯರಾಗಿದ್ದ  ಮಲ್ಲಿಕಾರ್ಜುನ ಮರ್ಚೇಡ್, ಜಯಪ್ರಕಾಶ್ ಗೌಡ, ವಿದ್ಯಾ ವಿದೇಯಕ ಪರಿಷತ್ ಸದಸ್ಯರು ಇದ್ದರು.
ಇಂಗ್ಲಿಷ್‌ ವಿಭಾಗದ ವಿದ್ಯಾರ್ಥಿಗಳ ನಾಡಗೀತೆಯಿಂದ ಕಾರ್ಯಕ್ರಮ ಆರಂಭಗೊಂಡಿತು.