ಕುಲಸಚಿವ ರುದ್ರೇಶ್  ಸಮಾಳ ಬಾರಿಸಿವಿದ್ಯಾರ್ಥಿಗಳ ನೃತ್ಯಕ್ಕೆ ಸಾಥ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,27- ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಇಂದು ನಡೆಯಿತು.
ಸಮಾರಂಭ ಆರಂಭಕ್ಕೂ ಮುನ್ನ ಆಗಮಿಸಿದ್ದ ಗಣ್ಯರನ್ನು ನಂದಿಕೋಲಿ, ಸಮಾಲಕ, ಪೂರ್ಣಕುಂಬಗಳ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯ್ತು.
ಈ ವೇಳೆ ಸಮಾಳದ ನಾದಕ್ಕೆ ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್ ವಿದ್ಯಾರ್ಥಿಗಳೊಂದಿಗೆ  ಹೆಜ್ಜೆ ಹಾಕಿದ್ದಲ್ಲದೆ ಸ್ವತಃ ತವೇ ಸಮಾಳ ಬಾರಿಸಿ ಹುರುದುಂಬಿಸಿದರು.
ಮೆರವಣಿಗೆಯಲ್ಲಿ ಕುಲಪತಿಗಳು, ಮಾಜಿ ಕುಲಪತಿಗಳು, ನಿರ್ಭಯಾನಂದ ಶ್ರೀಗಳು ಇದ್ದರು.