ಗ್ರಾಮೀಣ ಪ್ರದೇಶಕ್ಕೆ ವೈದ್ಯಕೀಯ ಸೇವೆ ಒದಗಿಸಿ
ಕೆಂಗೇರಿ.ಜು.೨೭- ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳನ್ನು ಸಬ್ಸಿಡಿ ತರದಲ್ಲಿ ಒದಗಿಸಬೇಕು ಎಂದು ಸಂಸದ ಡಾ. ಸಿ. ಎನ್. ಮಂಜುನಾಥ್ ಕರೆ ನೀಡಿದರು.
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಪಿ.ಆರ್. ಎಂ ಸಿ ಎಚ್)ಯ ಕದಂಬ ಸಭಾಂಗಣದಲ್ಲಿ ನಡೆದ ವೈದ್ಯರ ದಿನ ಸಮಾರಂಭದಲ್ಲಿ ಮಾತನಾಡಿದರು.ದೇಶಾದ್ಯಂತ ವಿವಿಧ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಡಾ. ಸಿ. ಷಣ್ಮುಗಂ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ರಾಜರಾಜೇಶ್ವರಿ ಸಮೂಹ ಸಮಸ್ತೆಗಳ ಅಧ್ಯಕ್ಷ ಡಾ.ಎ.ಸಿ. ಷಣ್ಮುಗಂ ಮಾತನಾಡಿ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಬೆಳೆದು ಬಂದ ಹಾದಿ ಈ ಆಸ್ಪತ್ರೆಯ ಸ್ಥಾಪನೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಅನುಕೂಲಗಳ ಬಗ್ಗೆ ತಿಳಿಸಿದರು. ಅದಲ್ಲದೆ ಬೆಂಗಳೂರು ಮೈಸೂರು ಹೆದ್ದಾರಿಯ ಚನ್ನಪಟ್ಟಣದಲ್ಲಿ ಚಾಮುಂಡೇಶ್ವರಿ ಆಸ್ಪತ್ರೆಯನ್ನು ಆರಂಭ ಮಾಡಲಾಗಿದೆ. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಇನ್ನಿತರ ಕಾಯಿಲೆಗಳಿಗೆ ಹೆಚ್ಚಿನ ಹೊತ್ತನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರಿಗೆ ಸನ್ಮಾನ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜರಾಜೇಶ್ವರಿ ಸಮೂಹ ಸಮಸ್ತೆಗಳ ಅಧ್ಯಕ್ಷ ಡಾ.ಎ.ಸಿ. ಷಣ್ಮುಗಂ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಸೀತಾರಾಮ್, ಮುಖ್ಯ ವೈದ್ಯ ನಿರೀಕ್ಷಕರಾದ ಡಾ. ಸತ್ಯಮೂರ್ತಿ, ಡಾ. ನವೀನ್, ಡಾ. ಪ್ರವೀಣ್, ಬಸವರಾಜ ಭಂಡಾರಿ ಉಪಸ್ಥಿತರಿದರು.