ಪತ್ರಕರ್ತ ಲಿಂ.ಬಿ.ಮಹಾದೇವಪ್ಪ ಪ್ರಶಸ್ತಿ ಪ್ರಧಾನ
ಸೇಡಂ, ಜು,೨೭: ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ತಾಲೂಕು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ, ಪ್ರಯುಕ್ತ ಪತ್ರಕರ್ತ ಲಿಂ.ಬಿ.ಮಹಾದೇವಪ್ಪ ಪ್ರಶಸ್ತಿ ಪ್ರಧಾನ ಹಾಗೂ ಕಾವ್ಯಬೆಳಕು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಜರುಗಿತ್ತು.ಈ ವೇಳೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ರಶ್ಮಿ.ಎಸ್,ಶ್ರೀ ಜಯತೀರ್ಥ ಪಾಟೀಲ್,ಪೂಜ್ಯ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್.ಆರ್ ಪಾಟೀಲ್ ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ,ಪತ್ರಕರ್ತರ ಜಿಲ್ಲಾಧ್ಯಕ್ಷರಾದ ಬಾಬುರಾವ್ ಯಡ್ರಾಮಿ,ಸಂಗಮನಾಥ ರೇವತಗಾಂವ,ಶಿವಶAಕ್ರಯ್ಯಸ್ವಾಮಿ ಇಮಡಾಪೂರ,ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಶರಣು ಮಹಾಗಾಂವ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿರೂಪಣೆ ಜಗನ್ನಾಥ್ ತರನಳ್ಳಿ ಮಾಡಿದರು.
ಪತ್ರಕರ್ತರಿಗೆ ನಿವೇಶನ ಹಾಗೂ ಉಚಿತ ಬಸ್ ಪಾಸ್ ನೀಡಲು ಸಚಿವರು ಮಹತ್ವ ನೀಡಲು ಮಹತ್ವ ನೀಡಬೇಕು.
ಬಾಬುರಾವ್ ಯಡ್ರಾಮಿ
ಪತ್ರಕರ್ತರ ಜಿಲ್ಲಾಧ್ಯಕ್ಷರು ಕಲಬುರ್ಗಿ