ಖ್ಯಾತ ಉದ್ಯಮಿ ಚಂದ್ರಶೇಖರ ಮಂದಕನಳ್ಳಿ ನಿಧನ
ಕಲಬುರಗಿ,ಜು.೨೭-ಖ್ಯಾತ ಉದ್ಯಮಿ ಚಂದ್ರಶೇಖರ ಮಂದಕನಳ್ಳಿ ಅವರು ಇಂದು ಬೆಳಿಗ್ಗೆ ೮ ಗಂಟೆಗೆ ನಿಧನರಾದರು.
ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ಮತ್ತು ನಾಲ್ವರು ಪುತ್ರಿಯರು ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶ್ರೀಯುತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು (ಜು.೨೭) ಸಾಯಂಕಾಲ ೫ ಗಂಟೆಗೆ ನಗರದ ಗಂಜ್ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.