ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಡುಗೆ ಅಪಾರ
ಬೀದರ:ಸೆ.29:ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ವಿಶಿಷ್ಠವಾದ ಕೊಡುಗೆಯನ್ನು ನೀಡಿದೆ. ಅಲ್ಲದೇ ಸಾಮಾಜಿಕ ಚಿಂತನೆಗಳೊಂದಿಗೆ ಜಗತ್ತಿಗೆ ಬೆಳಕ್ಕಾಗಿ ನಿಂತಿವೆ. ಅದರಲ್ಲಿ ವಚನ ಮ,ತ್ತು ದಾಸ ಸಾಹಿತ್ಯಗಳು ಜನಮುಖಿ ಆಂದೋಲನದ ಮುಖೇನ್ ಸಾಹಿತ್ಯ ವಾಙ್ಮಯ ರತ್ನತ್ರಯಗಳಾಗಿವೆ ಎಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜಾಧ್ಯಕ್ಷರಾದ ಡಾ. ಶಿವಕುಮಾರ ಉಪ್ಪೆ ನುಡಿದರು.
ಅವರು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು,(ರಿ) ಬೀದರ, ವತಿಯಿಂದ ನಗರದ ಓಂ ಸಿದ್ದಿವಿನಾಯಕ ಪದವಿ ಮಹಾವಿದ್ಯಾಲಯದಲ್ಲಿ ” ದಾಸ ಶ್ರೇಷ್ಠ ಕನಕದಾಸರು ಮತ್ತು ಸಾಂಸ್ಕøತಿಕ ನಾಯಕ ವಿಶ್ವಗುರು ಬಸವೇಶ್ವರರು ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡುತ್ತಾ, ಶರಣರು , ಸಂತರು ಮತ್ತು ದಾಸರು ಮಾನವ ಬದುಕಿನಲ್ಲಿ ಆತ್ಮಬಲವನ್ನು ಹೆಚ್ಚಿಸಿ, ಸುಂದರ ಬದುಕು ಕಟ್ಟಿಕೊಳ್ಳಲು ಮೌಲಿಕ ಸಂದೇಶÀವಾಣಿಯನ್ನು ನೀಡಿ, ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಎಂದರು.
ಬೀದರ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿಗಳಾದ ಶ್ರೀ ಗುಂಡಪ್ಪ ಹುಡಗೆ ” ದಾಸ ಶ್ರೇಷ್ಠ ಕನಕದಾಸರು ಮತ್ತು ಸಾಂಸ್ಕøತಿಕ ನಾಯಕ ಬಸವೇಶ್ವರರು ” ಕುರಿತು ಉಪನ್ಯಾಸ ನೀಡುತ್ತಾ, ಬಸವಣ್ಣ ಮತ್ತು ಕನಕದಾಸರು ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಕ್ಷೇತ್ರಗಳ ಶುದ್ದೀಕರಣದ ಹರಿಕಾರರು. ಇಬ್ಬರ ಕಾಲಘಟ್ಟಗಳು ಬೇರೆಯಾದರೂ ಬಹುತೇಕ ಸಮಾನತೆ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಸಾರುವ ಸಂದೇಶಗಳು ಒಂದೇಯಾಗಿವೆ. ಬಸವೇಶ್ವರರ ಸಾಮಾಜಿಕ ಚಿಂತನೆಗಳು ಕನಕದಾಸರ ಸಾಹಿತ್ಯದಲ್ಲಿ ಸದೃಶ್ಯ್ಯಗೊಂಡಿರುವುದು ಕಾಣುತ್ತೇವೆ. ಇಬ್ಬರ ಚಿಂತನೆಗಳು ಜನರಲ್ಲಿ ಮಾನವೀಯ ಮೌಲ್ಯಗಳು ಬಿತ್ತಿ, ವೈಚಾರಿಕೆ ತಳಹದಿಯಲ್ಲಿ ಸಮೃದ್ಧ ಮತ್ತು ಸಮಸಮಾಜವನ್ನು ಕಟ್ಟುವ ಸಂದೇಶಗಳ ಹೊತ್ತಿಗೆಗಳಾಗಿವೆ ಎಂದರು.
ಓಂ ಸಿದ್ದಿವಿನಾಯಕ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ ಚೆಟ್ಟಿ ಮುಖ್ಯ ಅತಿಥಿಗಳಾಗಿ ವಹಿಸಿ, ಶರಣರು, ದಾಸರು, ಸಂತ ಮಹಾಂತರು ಸಮಾಜದಲ್ಲಿ ಅನುಭವಿಸಿದ ಸತ್ಯ-ಮಿಥ್ಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಿ, ಉಜ್ವಲ ಬದುಕನ್ನು ರೂಪಿಸಿಕೊಳ್ಳಲು ಉಪದೇಶಗಳನ್ನು ನೀಡಿದ್ದಾರೆ ಎಂದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷರಾದ ಡಾ. ರವೀಂದ್ರ ಲಂಜವಾಡಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮ, ನೀತಿ, ಕೌಟುಂಬಿಕ , ಜೀವನ ಮತ್ತು ಮಾನವೀಯ ಮೌಲ್ಯಗಳು ಹಾಸುಹೊಕ್ಕಿರುವ ಹರಿದಾಸ ಸಾಹಿತ್ಯವು ನಿರಂತರ ಪ್ರಚಾರ ಮಾಡಲಾಗುವುದು ಎಂದರು.
ನಿರೂಪಣೆ ಕು. ಸುಹಾಸಿನಿ ಸ್ವಾಗತ- ಕು. ದೇವಿಕಾ, ವಂದನಾರ್ಪಣೆ – ಕು. ಸುಷ್ಮಾ ಮಾಡಿದರು.