ತೆರೆದ ಮನೆ ಕಾರ್ಯಕ್ರಮ
ಕೆಜಿಎಫ್.ಸೆ೨೯- ಕೆಜಿಎಫ್ ಪೊಲೀಸ್ ಜಿಲ್ಲೆಯ ಪೊಲೀಸರಿಂದ ಶಾಲಾ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೇತಮಂಗಲ ಪೊಲೀಸರು ಟಿ.ಗೊಲ್ಲಹಳ್ಳಿಯ ವಿದ್ಯಾ ಸಂಸ್ಕೃತಿ ಶಾಲೆ, ಕ್ಯಾಸಂಬಳ್ಳಿ ಪೊಲೀಸರು ಬೆನ್ನವಾರ ಗ್ರಾಮದ ವೇಮನ ವಿದ್ಯಾ ಸಂಸ್ಥೆ, ಬೂದಿಕೋಟೆ ಪೊಲೀಸರು ಕರ್ನಾಟಕ ಪಬ್ಲಿಕ್ ಶಾಲೆ, ಕಾಮಸಮುದ್ರಂ ಪೊಲೀಸರು ಕಾಮಸಮುದ್ರಂ ಸರ್ಕಾರಿ ಪ್ರೌಢ ಶಾಲೆ, ಉರಿಗಾಂ ಪೊಲೀಸರು ಎನ್.ಟಿ ಬ್ಲಾಕ್ ಸರ್ಕಾರಿ ಪ್ರಾಥಮಿಕ ಶಾಲೆ, ಆಂಡ್ರಸನ್‌ಪೇಟೆ ಪೊಲೀಸರು ಸೆಂಟ್ ಮೇರಿಸ್ ಶಾಲೆ ಮತ್ತು ರಾಬರ್ಟ್‌ಸನ್‌ಪೇಟೆ ಪೊಲೀಸರು ಮಹಾವೀರ್ ಜೈನ್ ಶಾಲೆ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗಳಿಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.