ಭಗತಸಿಂಗ್ ವೃತ್ತದ ನವಿಕರಣಕ್ಕೆ ನಗರ ಸಭೆ 10 ಲಕ್ಷ ರೂ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ಸೋನಾರೆ ಒತ್ತಾಯ
ಬೀದರ್ ಸೆ 29 ಃ ಬೀದರ ನಗರದ ಭಗತಸಿಂಗ ವೃತ್ತದಲ್ಲಿ ಶಹೀದ್ ಭಗತಸಿಂಗ್ ಅವರ ಜನ್ಮದಿನದ ಅಂಗವಾಗಿ ಭಗತಸಿಂಗ್ ಅವರ ಪ್ರತಿಮೆಗೆ ಮಾಲಾರ್ಪಣೆಗೈದು ಮಾತನಾಡುತ್ತಾ, ನಗರ ಸಭೆ ಕಳೆದ ಐದು ವರ್ಷಗಳಿಂದ ವೃತ್ತದ ನವಿಕರಣಕ್ಕೆ ಐದು ಲಕ್ಷ ರೂಪಾಯಿಗಳು ಮಂಜೂರು ಮಾಡಿದರು ಸಹ ಇಲ್ಲಿಯವರೆಗೆ ಬೀದರ ನಗರ ಸಭೆ ಅಧಿಕಾರಿಗಳು ಹಾಗೂ ಸದಸ್ಯರು ವೃತ್ತನವಿಕರಣ ಕಾಮಗಾರಿ ಪ್ರಾರಂಭ ಮಾಡಿಲ್ಲ ಈ ದುರಸ್ತಿ ಕಾಮಗಾರಿ ಶಿರ್ಘವೇ ಆರಂಭಿಸುವಂತೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವ ರಹೀಂಖಾನ್ ಅವರು ಸೂಚಿಸಬೇಕು ಎಂದು ಭಗತಸಿಂಗ್ ವೃತ್ತದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರು ಒತ್ತಾಯಿಸಿದ್ದಾರೆ.
ಐದು ವರ್ಷಗಳ ಹಿಂದೆ ಭಗತಸಿಂಗ್ ವೃತ್ತದ ದುರಸ್ಥಿಗೆ ಬೀದರ್ ನಗರ ಸಭೆ 5 ಲಕ್ಷ ರೂಪಾಯಿ ಮಂಜೂರು ಮಾಡಿ ಹಲವು ವರ್ಷಗಳಾದರು ಕಾಮಗಾರಿ ಪ್ರಾರಂಭವಾಗಿಲ್ಲ. ವೃತ್ತದ ನವೀಕರಣಕ್ಕೆ ನಗರ ಸಭೆ 10 ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕೆಂದು ಕೊರಿದ್ದಾರೆ.
ಈ ಸಂದರ್ಭದಲ್ಲಿ ಸುನೀಲ ಭಾವಿಕಟ್ಟಿ, ಸುಧಾಕರ್ ಎಲ್ಲಾನೋರ್, ಪ್ರದೀಪ್ ಬಿರಾದಾರ್, ಭಗತ್ ಸಿಂಧೆ, ಮಾರುತಿ ಏಣಕೂರೆ, ಸಂತೋಷ ಏಣಕೂರೆ, ವಿನೋದ ಹೊಸಮನಿ, ಕುಪೇಂದ್ರ ಹೊಸಮನಿ, ಸೇರಿದಂತೆ ಇತರರು ಇದ್ದರು.