ಜೀವನಶೈಲಿ ಬದಲಾವಣೆಯಿಂದ ರೋಗಗಳಿಂದ ದೂರ ಇರಲು ಸಾಧ್ಯ: ಡಾ. ನಿತಿನ್ ಗುದಗೆ
ಬೀದರ: ಸೆ.29:ಇಂದಿನ ಪತ್ರಕರ್ತರು ಸಾಕಷ್ಟು ಒತ್ತಡದ ಮಧ್ಯ ಕೆಲಸ ನಿರ್ವಹಿಸುತ್ತಿದ್ದು ಹಾಗಾಗಿ ಸ್ವಲ್ಪ ಜೀವನ ಶೈಲಿ ಬದಲಾವಣೆ ಮಾಡಿಕೊಂಡರೆ ವಿವಿಧ ರೋಗಗಳಿಂದ ದೂರ ಇರಲು ಸಾಧ್ಯ ಎಂದು ಗುದಗೆ ಆಸ್ಪತ್ರೆಯ ಹೃದಯ ತಜ್ಞರಾದ ಡಾ. ನಿತಿನ್ ಗುದಗೆ ಅವರು ಹೇಳಿದರು.
ಅವರು ವಿಶ್ವ ಹೃದಯ ದಿನಾಚರಣೆ ನಿಮಿತ್ಯವಾಗಿ ಸಪ್ಟೆಂಬರ್ 28ರಂದು ಪತ್ರಕರ್ತರಿಗೆ ಹೃದಯ ಹಾಗೂ ವಿವಿಧ ಕಾಯಿಲೆಗಳ ಉಚಿತ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಮಧ್ಯಪಾನ ಧೂಮಪಾನ ಎಣ್ಣೆ ಅಂತಹ ಪದಾರ್ಥಗಳು ಸೇವಿಸುತ್ತಿರುವುದರಿಂದ ಹೆಚ್ಚಾಗಿ ಹೃದಯ ಕಾಯಿಲೆ ಬರುವ ಲಕ್ಷಣಗಳಿವೆ ಹಾಗಾಗಿ ಎಲ್ಲಾ ವ್ಯಸನಗಳಿಂದ ಪ್ರತಿಯೊಬ್ಬರೂ ದೂರವಿರಬೇಕೆಂದು ಅವರು ಕಿವಿ ಮಾತು ಹೇಳಿದರು.
ಡಾ. ಸಚಿನ್ ಗುದಗೆ ಅವರು ಮಾತನಾಡಿ ಪತ್ರಕರ್ತರು ತಮ್ಮ ಕೆಲಸದೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯ ಕೆಟ್ಟಿದರೆ ನಾವು ಏನು ಮಾಡಲು ಸಾಧ್ಯವಿಲ್ಲ ಹಾಗಾಗಿ ಕೆಲಸಕ್ಕಿಂತ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಹೇಳಿದ್ದರು.
ಗುದಗೆ ಆಸ್ಪತ್ರೆಯ ಅಧ್ಯಕ್ಷರು ಹಾಗೂ ಹೃದಯ ತಜ್ಞರಾದ ಡಾ, ಚಂದ್ರಕಾಂತ್ ಗುದಗೆ ಅವರು ಮಾತಾಡಿ ನಾವು 2012ರಿಂದ ಹೃದಯ ದಿನಾಚರಣೆ ಆಚರಿಸಲಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆ ತ್ವರಿತವಾಗಿ ಹರಡುತ್ತಿದೆ ಹೃದಯ ಕಾಯಿಲೆ ಹಾಗೂ ಮಧುಮೇಹ ಕಾಯಿಲೆಗಳು ಮನುಷ್ಯನಿಗೆ ಮಾರಕವಾಗಿವೆ ಹಾಗಾಗಿ ಈ ಕಾಯಿಲೆಗಳಿಗೆ ಮೇಲಿಂದ ಮೇಲೆ ತಪಾಸಣೆ ಮಾಡಿಕೊಳ್ಳಬೇಕೆಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಡಾ ಎಸ್ ಆರ್ ಹಣಮಶೆಟ್ಟಿ, ಡಾ. ಸಿ ಆನಂದ್ ರಾವ್, ಡಾ. ಮದನಾ ವೈಜಿನಾಥ್, ಡಾ. ಎಂ ಎ ಸೇರಿಕಾರ್, ಹಾಗೂ ಡಾ. ಮಹೇಶ್ ತೊಂಡಾರೆ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಸಾಕಷ್ಟು ಪತ್ರಕರ್ತರು ಹಾಜರಿದ್ದರು ಶ್ರೀಕಾಂತ್ ಸ್ವಾಮಿಯವರು ಕಾರ್ಯಕ್ರಮ ನಿರೂಪಿಸಿದರೆ ಡಾ. ಸಚಿನ್ ಗುದಗೆ ಅವರು ಕೊನೆಯಲ್ಲಿ ಎಲ್ಲರಿಗೂ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಪತ್ರಕರ್ತರಿಗೆ ಉಚಿತ ತಪಾಸಣೆ ನಡೆಸಲಾಯಿತು.