ವಾಲ್ಮೀಕಿ ಭವನ ನಿರ್ಮಾಣಕ್ಕೆ ಚಾಲನೆ
ಕೋಲಾರ,ಜು.೨೭- ವಕ್ಕಲೇರಿ ಗ್ರಾಮ ಪಂಚಾಯಿತಿಯ ಅಲಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟ ನಿವೇಶನ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಅಂದಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಕಾಂತರಾಜ್ ವಾಲ್ಮೀಕಿ ಭವನಕ್ಕೆ ೨೫ ಲಕ್ಷಗಳ ಅನುದಾನ ಬಿಡುಗಡೆ ಮಾಡಿರುತ್ತಾರೆ.
ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ದವರು ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಾಲ್ಮೀಕಿಗೆ ಜೈಕಾರದ ಘೋಷಣೆಗಳನ್ನು ಕೂಗುವ ಮೂಲಕ ವಾಲ್ಮೀಕಿಭವನ ನಿರ್ಮಾಣಕ್ಕೆ ಚಾಲನೆ ನೀಡಿದರು.
ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಬಲೀಕರಣವಾಗಬೇಕಿದೆ. ಸಮುದಾಯದ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲು ಅನಕೂಲವಾಗುವಂತೆ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಶೈಲಜಾ ವೆಂಕಟೇಶ್, ಸದಸ್ಯರಾದ ಶ್ರೀನಾಥ್, ರಾಮಚಂದ್ರ, ಪ್ರಶಾಂತ್ ನಾಯಕ್, ನಾರಾಯಣಸ್ವಾಮಿ, ಚಂದ್ರಪ್ಪ, ಗೋಪಾಲಯ್ಯ, ಕಿಶೋರ್, ನಾರಾಯಣಸ್ವಾಮಿ, ಪ್ರಭಾಕರ್, ಮಂಗಮ್ಮ, ನಾರಾಯಣಮ್ಮ, ವಿಜಯಮ್ಮ, ವೆಂಕಟೇಶ್, ರಾಹುಲ್, ನಾಯಕ್, ವೆಂಕಟೇಶ್, ಸುದೀಪ್, ಲಕ್ಷ್ಮಯ್ಯ, ನವೀನ್ ಕುಮಾರ್, ಈರೇಶ್, ನಾಗೇಶ್, ಕೃಷ್ಣಪ್ಪ ಭಾಗವಹಿಸಿದ್ದರು.