ಚಿ.ನಾ.ಹಳ್ಳಿ: ೪ ಡೆಂಗ್ಯೂ ಪ್ರಕರಣ ದಾಖಲು
ಚಿಕ್ಕನಾಯಕನಹಳ್ಳಿ, ಜು. ೨೭- ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು ೧೦ ಅನುಮಾನಾಸ್ಪದ ಪ್ರಕರಣಗಳಿದ್ದು, ೪ ಡೆಂಗ್ಯೂ ಪ್ರಕರಣಗಳು ಪಟ್ಟಣದಲ್ಲಿ ಖಚಿತವಾಗಿವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಯಶ್ವಂತ್ ತಿಳಿಸಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ೨ ಡೆಂಗ್ಯೂ ಪ್ರಕರಣಗಳು ಖಚಿತವಾಗಿದ್ದು, ೨ ಪ್ರಕರಣ ಅನುಮಾನಾಸ್ಪದವಾಗಿದೆ. ಮಹಾಲಕ್ಷ್ಮಿ ಬಡಾವಣೆಯಲ್ಲಿ ೧ ಪ್ರಕರಣ ಖಚಿತವಾಗಿದೆ. ಜಗಜೀವನರಾಂ ನಗರದಲ್ಲಿ ೧ ಪ್ರಕರಣ ಖಚಿತ, ೧ ಪ್ರಕರಣ ಅನುಮಾನಾಸ್ಪದ, ವಿದ್ಯಾನಗರದಲ್ಲಿ ೩ ಪ್ರಕರಣ ಅನುಮಾನಾಸ್ಪದವಾಗಿವೆ ಎಂದು ತಿಳಿಸಿದ್ದಾರೆ.
ತಾಲ್ಲೂಕಿನ ಮಲ್ಲೇನಹಳ್ಳಿ ತಾಂಡ್ಯ-೨, ಹೊಯ್ಸಳಕಟ್ಟೆ-೧, ಹೆಸರಹಳ್ಳಿ- ೧, ಚೌಳಕಟ್ಟೆ-೧, ಡಿ.ವೈ.ಗೆರೆ-೧, ಭರಣಾಪುರ-೧, ಗೋಪಾಲಪುರ-೧ , ಹುಳಿಯಾರು -೩, ತಿಮ್ಮನಹಳ್ಳಿ-೧, ಕುಶಾಲಪುರ-೧, ಸಾದರಹಳ್ಳಿ- ೧, ಕಾತ್ರಿಕೆಹಾಳ್-೨, ಕ್ಯಾತನಾಯ್ಕನಹಳ್ಳಿಯಲ್ಲಿ ೧ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ತಾಲ್ಲೂಕು ವೈದ್ಯಾಧಿಕಾರಿ ಡಾ. ಯಶ್ವಂತ್ ಸುದ್ದಿಗಾರರೊಂದಿಗೆ ಮಾತನಾಡಿ, ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡ ಕಡೆ ಲಾರ್ವ ಸರ್ವೆ ನಡೆಸಲಾಗುತ್ತಿದೆ. ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳಲ್ಲಿ ಸೊಳ್ಳೆ ಬರುವ ಕಡೆ ಫಾಗಿಂಗ್ ಮಾಡಿಸಲಾಗುತ್ತಿದೆ. ಈಗಾಗಲೇ ತಾಲ್ಲೂಕು ಆಸ್ಪತ್ರೆಯಲ್ಲಿ ಜ್ವರ ಬಂದವರ ೧೫ ಸಾವಿರ ಪ್ಲೇಟ್ಸ್ ಇದ್ದವರನ್ನು ಗುಣಪಡಿಸಿ ರೋಗಿ ಗಳನ್ನು ಕಳುಹಿಸಲಾಗುತ್ತಿದೆ. ಡೆಂಗ್ಯೂ ಪ್ರಕರಣಗಳು ಖಚಿತವಾದ ಮನೆಗಳಲ್ಲಿ ಸಂಪೂರ್ಣ ಫಾಗಿಂಗ್ ಮಾಡಿಸಲಾಗುತ್ತಿದೆ ಎಂದರು.