ಕಾರ್ಗಿಲ್ ವಿಜಯೋತ್ಸವ ಅಚರಣೆ
ಕೋಲಾರ,ಜು.೨೭- ೨೫ನೇ ಕಾರ್ಗಿಲ್ ವಿಜಿಯೋತ್ಸವವನ್ನು ರೈತ ಸಂಘದಿಂದ ಜಿಲ್ಲೆಯ ನಿವೃತ್ತ ಯೋದರಿಗೆ ಹಸಿರು ಶಾಲು ಗಿಡ ನೀಡುವ ಮುಖಾಂತರ ಸರಳವಾಗಿ ಆಚರಣೆ ಮಾಡಿ ಯೋಧರ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಿಂದ ವಿಧಾನಸಭೆ ಸಂಸತ್ ವರೆಗೂ ಆಯ್ಕೆಯಾಗಿರುವ ಜನ ಪ್ರತಿನಿಧಿಗಳಿಗೆ ಕಡ್ಡಾಯವಾಗಿ ೫ ವರ್ಷ ಗಡಿಭಾಗದಲ್ಲಿ ದೇಶ ಸೇವೆ ಮಾಡುವ ಕಾನೂನು ಜಾರಿಯಾದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ನಡೆದ ನಿವೃತ್ತ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರವರು ಆದಮ್ಯ ಸಾಹಸ ಅಪ್ರತಿಮೆ ಶೌರ್‍ಯ ದೇಶಭಕ್ತಿಯ ಸ್ಪೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು ಭಾರತಾಂಭೆಯ ಘನತೆ ಗೌರವವನ್ನು ಮುಗಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗ್ರಿಲ್ ಯುದ್ದದ ವೀರ ಹುತಾತ್ಮರಿಗೆ ಶತಶತ ನಮನಗಳನ್ನು ಸಲ್ಲಿಸುವ ಜೊತೆಗೆ ರೈತ ಮತ್ತು ಯೋಧರನ್ನು ಸರ್ಕಾರಗಳು ನಿರ್ಲಕ್ಷೆ ಮಾಡಬಾರದೆಂದು ಕಿವಿ ಮಾತು ಹೇಳಿದರು.
ಕಾರ್ಗ್ರಿಲ್ ವಿಜಯ ದಿವಸಕ್ಕೆ ಇಂದು ರಜತ ಸಂಭ್ರಮ ಭಾರತೀಯ ಸೇನೆಯ ಶೌರ್ಯ ಸಾಹಸಗಾಥೆ ಎಂದೆದಿಗೂ ಪ್ರೇರಣಾದಾಯಿ ಭಾರತದ ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜೊತೆಗೆ ಪಾಕಿಸ್ತಾನದ ವಿರುದ್ದ ಭಾರತ ವಿಜಿಯ ಸಾದಿಸಿದ ಸಂಭ್ರವನ್ನು ಆಚರಿಸುವ ಕ್ಷಣವು ಹೌದು, ರಾಷ್ಟ್ರಭಕ್ತಿ ಭಾವೈಕ್ಯತೆಯನ್ನು ಜಾಗೃತಗೊಳಿಸಿದ ಕಾರ್ಗ್ರಿಲ್ ಯುದ್ದ ದೇಶ ಮೊದಲು ಎಂಬ ಉದಾತ್ತ ಭಾವಕ್ಕೆ ಜೀವ ತುಂಬಿತು ಭಯೋತ್ಪಾದನೆ ಹಾಗೂ ರಾಷ್ಟ್ರದ್ರೋಹಿಗಳ ವಿರುದ್ದ ಕಠಿಣ ಕ್ರಮವೇ ಅನಿರ್ವಾಯ ಎಂಬುದನ್ನು ಕಾರ್ಗ್ರಿಲ್ ಸಮರ ಸಾಬೀತು ಮಾಡಿತು, ಕಾರ್ಗ್ರಿಲ್ ಸಮರ ಪಾಕಿಸ್ತಾನಕ್ಕೆ ಹಲವು ಪಾಠಗಳನ್ನು ಕಲಿಸಿದಲ್ಲದೆ ಅಂತರ್‌ರಾಷ್ಟ್ರೀಯ ವಲಯದಲ್ಲಿ ಅದರ ಮುಖವಾಡವನ್ನು ಬಯಲು ಮಾಡಿತು. ಗಡಿಯನ್ನು ಕಾಯುವ ಯೋಧರನ್ನು ಗೌರವಿಸುತ್ತಾ ರಾಷ್ಟ್ರಕ್ಕಾಗಿ ಜೀವಿಸುವ ಸಂಕಲ್ಪವನ್ನು ಕೈಗೊಂಡಲು ಈ ವಿಜಯದಿನ ಕಾರ್ಗ್ರಿಲ್ ವಿಜಯ ೨೫ನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಯೋಧರನ್ನು ಗುರುತಿಸುವ ಇಚ್ಚಾಸಕ್ತಿ ಸರ್ಕಾರಗಳು ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ದೇಶಕ್ಕೆ ತನ್ನ ಜೀವವನ್ನು ಮುಡುಪಾಗಿಟ್ಟಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆಗೆ ಸರ್ಕಾರ ನಿಲ್ಲುತ್ತಿಲ್ಲ. ಹುತಾತ್ಮರಾದ ಯೋಧರನ್ನು ಅವರ ಅಂತ್ಯಕ್ರಿಯೆ ಆಗುವರೆಗೂ ಮಾಧ್ಯಮದ ಮುಂದೆ ಸರ್ಕಾರಗಳು ವಿವಿಧ ಆಸ್ವಾಶಣೆ ನೀಡಿ ಕಡೆಗೆ ಸರ್ಕಾರಗಳು ಕುಟುಂಬಗಳು ವರ್ಷಾನಗಟ್ಟಲೆ ಅಲೆದಾಡಿದರು ಕನಿಷ್ಠ ಅವರ ಸಮಸ್ಯೆ ಬಗ್ಗೆ ವಿಚಾರಿಸುವ ಅಧಿಕಾರಿಗಳು ಇರುವುದಿಲ್ಲವೆಂದು ಆರೋಪ ಮಾಡಿದರು.
ಸರ್ಕಾರವೇ ಮಂಜೂರು ಮಾಡುವ ಸರ್ಕಾರಿ ಜಮೀನಿಗಾಗಿ ೨೫ ವರ್ಷಗಳಿಂದ ಜಿಲ್ಲಾಡಳಿತ ತಾಲ್ಲೂಕು ಆಡಳಿತಕ್ಕೆ ಅಲೆದಾಡಿದರು ಯಾವುದೇ ನ್ಯಾಯ ಸಿಗುತ್ತಿಲ್ಲ. ಕಡೆಗೆ ದೇಶ ಕಾದು ತನ್ನ ಪ್ರಾಣವನ್ನು ಅರ್ಪಣೆ ಮಾಡಿದ ಕುಟುಂಬಗಳು ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಇರುವುದು ದುರದೃಷ್ಟಕರ ಎಂದರು.
ಪದವಿ ಪಡೆದು ಉದ್ಯೋಗ ಸಿಗದೆ ಪರದಾಡುತ್ತಿರುವ ಯುವ ಪೀಳಿಗೆಗೆ ಅನುಕೂಲವಾಗುವ ಅಗ್ನಿಪತ್ ಮೂಲಕ ಹೆಚ್ಚಿನ ಸೇನೆಗೆ ನೇಮಕ ಮಾಡಿಕೊಳ್ಳಬೇಕು. ನಿರುದ್ಯೋಗ ತಪ್ಪಿಸಿ ಯುವಕರು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಬೇಕೆಂದು ಸರ್ಕಾರಗಳಿಗೆ ಸಲಹೆ ನೀಡಿದರು.
ನಿವೃತ್ತ ಯೋದರಾದ ಮಂಜುನಾಥ, ವೆಂಕಟೇಶ್ ಮತ್ತಿತರರು ಮಾತನಡಿ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಸೈನಿಕರ ವಿವಿಧ ಬೇಡಿಕೆಗಳನ್ನು ಹೀಡೇರಿಸಲು ಇಚ್ಚಾಸಕ್ತಿ ಕೊರತೆ ಇದೆ. ಜಮೀನು ಇಲ್ಲ. ಶಾಲೆ ಇಲ್ಲ. ಕನಿಷ್ಠ ಪಕ್ಷ ಯೋಧರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲು ಜಾಗವನ್ನು ಸಹ ನೀಡುತ್ತಿಲ್ಲವೆಂದು ಸರ್ಕಾರದ ಯೋಧರ ವಿರೋಧಿ ನೀತಿಯನ್ನು ಖಂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಜುನಾಥಗೌಡ, ಶಾಂತಕುಮಾರ್, ಕುಮಾರ್, ಸಿ.ಎನ್.ರಘು, ಶಿವರಾಜ್, ಶ್ರೀರಾಮ್, ಸುರೇಶ್, ದೇವರಾಜ್, ಪುತ್ತೇರಿರಾಜು, ಗಿರೀಶ್, ವಕ್ಕಲೇರಿ ಹನುಮಯ್ಯ, ನಿವೃತ್ತಿ ಯೋಧರು ಭಾಗವಹಿಸಿದರು.