ಹಲವಡೆ ಕೀಟ ರೋಗ ಅಧ್ಯಯನ ತಂಡ ಭೇಟಿಮಾಹಿತಿ ಪಡೆದು ಬೆಳೆ ನಿರ್ವಹಣೆಗೆ ಡಾ. ಜಹೀರ್ ಅಹ್ಮದ ಸಲಹೆ
ಆಳಂದ: ಜು.೨೭:ತಾಲೂಕಿನ ಕೆಲ ಭಾಗ ಸೇರಿ ಜಿಲ್ಲೆಯ ಹಲವಡೆ ಮುಂಗಾರು ಹಂಗಾಮಿನ ಬೆಳೆಗಳ ಕೀಟ ಮತ್ತು ರೋಗದ ಕುರಿತು ಜಿಲ್ಲಾ ಅಧ್ಯಯನ ತಂಡವು ಭೇಟಿ ನೀಡಿ ಪರಿಶೀಲನೆ ಕೈಗೊಂಡು ರೈತರಿಗೆ ಸಲಹೆ ಸೂಚನೆಗಳು ನೀಡಿದೆ.
ತಂಡದಲ್ಲಿ ಸೇಡಂ ವಿಭಾಗ ಕೃಷಿ ನಿರ್ದೇಶಕಿ ಉಪನಿರ್ದೇಶಕಿ ಅನುಸೊಯಾ ಹೂಗಾರ, ಕೆವಿಕೆ ಸಸ್ಯರೋಗ ವಿಜ್ಞಾನಿ ಡಾ. ಜಹೀರ್ ಅಹ್ಮದ್, ಬೇಸಾಯ ತಜ್ಞ ಡಾ. ಯುಸೂಫ್ ಅಲಿ ನಿಂಬರಗಿ ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ್ ಬಿ.ವಿ, ಅವರು ಒಳಗೊಂಡ ತಂಡವು ತಾಲೂಕಿನ
ಸುಂಟನೂರ ವಲಯ ಮತ್ತು ಕಲಬುರಗಿ ವಲಯದ ಪಟ್ಟಣ, ಮಾಡಬೋಳ, ಕೊಡ್ಲಾ, ಟೆಂಕಳಿ ಕ್ರಾಸ್ ವಲಯಗಳಲ್ಲಿ ಸಂಚರಿಸಿ ಬೆಳೆಗಳಲ್ಲಿ ರೋಗ, ಕೀಟಬಾಧೆ ವೈರಸ್‌ಗಳ ಕುರಿತಾದ ಅಧ್ಯಯನ ನಡೆಸಿದೆ.
ಉದ್ದು, ಹೆಸರು ಬೆಳೆಗೆ ರಸಹೀರುವ ಕೀಟ, ಮುದಡಿ ರೋಗ, ಹಳದಿ ವೈರಸ್ ರೋಗ ಎಲೆಕೆಂಪಾಗುವಿಕೆ ಹಾಗೂ ಹೇನಿನ ಬಾಧೆ ಕುರಿತು ತಜ್ಞರು ಪರಿಶೀಲನೆ ನಡೆಸಿದರು.
ಅಧ್ಯಯನ ವೇಳೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಸಸ್ಯರೋಗ ವಿಜ್ಞಾನಿ ಡಾ. ಜಹೀರ್ ಅಹ್ಮದ್ ಅವರು ಈ ವೇಳೆ ರೈತರಿಗೆ ಸಲಹೆ ನಿಡಿರುವ ಅವರು, ವೈರಸ್ ಪೀಡಿತ ಹಳದಿ ಗಿಡಗಳನ್ನು ಕಿತ್ತಿನಾಶಪಡಿಸಿ ಆರೋಗ್ಯವಂತ ಗಿಡಗಳಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿಯಲ್ಲಿ ದೊರೆಯುವ ಬೇವಿನ ಎಣ್ಣೆ ಪ್ರತಿ ಲೀಟರ್ ನೀರಗೆ ೨ ಎಂಎಲ್ ಬೆರಿಸಿ ಸಿಂಪರಿಸಬೇಕು. ನುಸಿ ಹಾಗೂ ಮದುಡಿರೋಗ ಹತೋಟಿಕೆ, ನೆತ್ತಿಸುಡುವ ರೋಗ ಹತೋಟಿಗೆ ಟಿಯಾಮಿಟಾಗ್ಜಂ ಅರ್ಧ ಗ್ರಾಮ ಪ್ರತಿ ಲೀಟರ್ ನೀರಿನಲ್ಲಿ ಅಥವಾ ಇಮಿಡಾ ಗ್ಲೊಪಿಟ್ ಅರ್ಧ ಎಂಎಲ್ ಪ್ರತಿ ಲೀಟರ್ ನೀರಿನಲ್ಲಿ ಬೆರಿಸಿ ಸಿಂಪರಿಸಬೇಕು. ಉತ್ತಮ ಇಳುವರಿಗಾಗಿ ಸಮಗ್ರ ಪೋಷಕಾಂಶ ಮಿಶ್ರಣವನ್ನು ಎರಡು ಮಿಲಿ ಪ್ರತಿ ಲೀಟರ್ ನೀರನಲ್ಲಿ ಬೆರಿಸಿ ಸಿಂಪರಿಸಬೇಕು ಎಂದು ಅವರು ಸಲಹೆ ನೀಡಿದರು.
ಹೆಸರು ಬೆಳೆಯಲ್ಲಿ ಹೇನಿನ ಬಾಧೆ ಅತಿಯಾಗಿ ಕಂಡಿದೆ. ಡೈಮಿಮಿಟೋಏಟ್ ೨ ಎಂಎಲ್. ಪ್ರತಿಲೀಟರ್ ನೀರಿಗೆ ಬೇರಸಿ ರೈತರು ಸಿಂಪಡಿಸುವುದನ್ನು ಸಹ ವಿಜ್ಞಾನಿಗಳು ಗಮನಿಸಿ ಸೂಕ್ತ ಸಲಹೆ ನೀಡಿದರು. ಬಂಗಾಳಕೊಲಿ ವೈಯುಭಾರ ಕುಸಿತದಿಂದ ಅಲ್ಲಲ್ಲಿ ತೆಗ್ಗಿ ದಿನ್ನೆ ಹೊಲಗಳಲ್ಲಿ ನೀರು ನಿಂತದಲ್ಲಿ ಸೂಕ್ತವಾಗಿ ಬಸಿಕಾಲುವೆ ಕಲ್ಪಿಸುವಂತೆ ಸೂಚಿಸಿದ ಅವರು, ಕಳೆದ ಸಾಲಿನಲ್ಲಿ ಬರ ಆವರಿಸಿತ್ತಾದರು. ಈ ಬಾರಿ ಸಮರ್ಪಕವಾಗಿ ಮಳೆಯಾದ್ದರಿಂದ ತೊಗರಿ, ಉದ್ದು, ಹೆಸರು ಬೆಳೆಗಳು ಸದ್ಯಕ್ಕೆ ಉತ್ತಮ ಸ್ಥಿತಿಯಲಿವೆ. ಬಂಗಾಳಕೊಲ್ಲಿ ವಾಯುಬಾರ ಕುಸಿತ ಮೂರುದಿನಗಳಲ್ಲಿ ಕುಗ್ಗಲಿದೆ, ತೊಗರಿ, ಉದ್ದು ಹೆಸರು ಸೋಯಾಭಿನ್ ಬೆಳೆಯಲ್ಲಿ ಕಳೆ ನಿರ್ವಹಣೆ ಕೈಗೊಳ್ಳಲು ವಿಜ್ಞಾನಿಗಳಿಂದ ಮಾಹಿತಿ ಪಡೆದು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆ ನಿರ್ವಹಣೆ ಕೈಗೊಳ್ಳಬೇಕು. ೨೦೨೪ರ ಮೇ ತಿಂಗಳ ಅವಧಿಯಿಂದ ಜುಲೈ ವರೆಗೆ ೨೯ ಮಳೆ ದಿನಗಳಾಗಿದ್ದು, ಜಿಲ್ಲೆಯಲ್ಲಿ ೨೮೫ ಎಂ.ಎA. ಮಳೆಯಾಗಿದೆ ಎಂದು ಡಾ. ಜಹೀರ್ ಅಹ್ಮದ್ ಅವರು ಹೇಳಿದರು.
ಕೆವಿಕೆ ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ್ ಬಿ.ವಿ, ಸಮಗ್ರ ಪೋಷಕಾಂಶವನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ನೀಡುವಂತೆ ಅವರು ಸಲಹೆ ನೀಡಿದ್ದಾರೆ. ಇನ್ನೊರ್ವ ಕೆವಿಕೆ ಬೇಸಾಯ ತಜ್ಞ ಡಾ. ಯುಸೂಫ್ ಅಲಿ ನಿಂಬರಗಿ ಅವರು ಪಲ್ಸ್ ಮ್ಯಾಜಿಕ್ ಬಳಕೆ ಕುರಿತು ಮಾಹಿತಿ ನೀಡಿದರು.
‘ಪಲ್ಸ್ ಮ್ಯಾಜಿಕ್’ ಬಳಕೆ:
ಪಲ್ಸ್ ಮ್ಯಾಜಿಕ್ ಒಂದು ಮುಖ್ಯ ಮತ್ತು ಲಘು ಪೋಷಕಾಂಶಗಳ ಮಿಶ್ರಣವನ್ನು ಮತ್ತು ಸಸ್ಯವರ್ಧಕಗಳನ್ನು ಹೊಂದಿದೆ. ಪಲ್ಸ್ ಮ್ಯಾಜಿಕ್ ಇದರಲ್ಲಿ ಶೇ. ೧೦ರಷ್ಟು ಸಾರಜನಕ, ಶೇ. ೪೦ರಷ್ಟು, ರಂಜಕ, ಶೇ. ೩ರಷ್ಟು ಲಘು ಪೋಷಕಾಂಶಗಳು ಮತ್ತು ೨೦ ಪಿಪಿಎಂನಷ್ಟು ಸಸ್ಯ ಪ್ರಚೋದಕಗಳು ಇರುವುದರಿಂದ ದ್ವಿದಳ ಧಾನ್ಯದ ಬೆಳೆಗಳು ದಷ್ಟ-ಪುಷ್ಟವಾಗಿ ಬೆಳೆದು ಹೂ ಮತ್ತು ಕಾಯಿಗಳ ಉದುರುವಿಕೆಯನ್ನು ತಡೆಗಟ್ಟಿ ಕಾಯಿ ಕಟ್ಟುವಿಕೆ ಹೆಚ್ಚಾಗಿ ಮತ್ತು ಪ್ರತಿ ಗಿಡದಲ್ಲಿ ಕಾಯಿಗಳ ಮಾಗುವಿಕೆ ಸಮನಾಗಿರುತ್ತದೆ ಎಂದು ಕೆವಿಕೆ ಬೇಸಾಯ ತಜ್ಞ ಡಾ. ಯುಸೂಫ್ ಅಲಿ ನಿಂಬರಗಿ ಹೇಳಿದರು.
ಪಲ್ಸ್ ಮ್ಯಾಜಿಕ್‌ನ್ನು ಶೇ. ೫೦ರಷ್ಟು ಹೂ ಬಿಟ್ಟಿÁಗ ಮತು ್ತ೧೫ ದಿನಗಳ ನಂತರ ಪ್ರತಿ ಎಕರೆಗೆ ೪ ಕಿ.ಗ್ರಾಂ.ನAತೆ ೨ ಸಾರಿ ಸಿಂಪಡಿಸಬೇಕು. ಇದರ ಸಿಂಪರಣೆಯಿAದ ಪ್ರತಿ ಕಾಳುಗಳು ದಪ್ಪವಾಗಿ ಕಾಳಿನ ತೂಕದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತದೆ. ಇದರಿಂದ ಶೇ. ೧೭-೨೦ರಷ್ಟು ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದರು.
ಥ್ರಿಪ್ಸ್ ನುಸಿ ಬೇಡ ಹತೋಟಿಗೆ ಥಿಯೋಮೆಥಾಕ್ಸಂ ಅರ್ಧ ಗ್ರಾಮ ಆಥವಾ ಬೇವಿನ ಎಣ್ಣೆ ೨ ಮಿಲಿ ಒಂದು ಲೀಟರ್ ನೀರಲ್ಲಿ ಬೆರೆಸಿ ಸಿಂಪಡಿಸಬೇಕು . ರೋಗ ಗಿಡ ಹರದದಂತೆ ಮುನ್ನೆಚ್ಚರಿಕೆ ಆಗತ್ಯ ಎಂದು ಡಾ. ನಿಂಬರಗಿ ಅವರು ವಿವರಿಸಿದ್ದಾರೆ.