ಹಿರಿಯ ಪತ್ರಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೭: ಜೈಭೀಮ ಸೇನಾ ಸಂಘಟನೆ ವತಿಯಿಂದ ಹಿರಿಯ ಪತ್ರಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸನ್ಮಾನಿಸಲಾಯಿತು.
ಡಾ. ಬಿ.ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಮುಖಂಡ ಮಹ್ಮದರಫೀಕ ಟಪಾಲ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಕುಮಾರಿ ಆರತಿ ಶಹಾಪೂರ, ದಲಿತ ಮುಖಂಡರಾದ ಅಭಿಷೇಕ ಚಕ್ರವರ್ತಿ, ಕೆ.ಆರ್ ತೊರವಿ, ಸುಭಾಷ ನಾಯ್ಕೋಡಿ ಆಲಮೇಲ, ಎಸ್.ಟಿ ಘಟಕದ ಅಧ್ಯಕ್ಷ ಅಶೋಕ ನಾಯ್ಕೋಡಿ, ದೇವೆಂದ್ರ ಮಿರೇಕರ, ಯಶವಂತ ದೊಡಮನಿ ಹಾಗೂ ಇಂಡಿ ತಾಲೂಕಾ ಅಧ್ಯಕ್ಷ ಬಸವರಾಜ ಹಾದಿಮನಿ, ಪರಶುರಾಮ ಕಾಂಬಳೆ, ಸುನೀಲ ಸಂಕದ, ಯಮನು ಬೂದಿಹಾಳ, ಸಂತೋಷ ಚೂರಿ, ಕಲ್ಲಪ್ಪ ಹರಿಜನ, ಫಯಾಜ್ ಜಮಾದಾರ, ಬಿ.ಆರ್. ಲಿಂಬುಡಕರ, ನಜೀರ ಅಹ್ಮದ ಗುಲ್ಬರ್ಗಾ, ಕಲ್ಮೇಶ ನಾಟಿಕಾರ, ಮಲ್ಲಪ್ಪ ಹಿಟ್ಟಿನಹಳ್ಳಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಬಾಯಕ್ಕಾ ಬೋರಗಿ, ಲತಾ ಈಟಿ, ಮೀನಾಕ್ಷಿ ಕಾಲೇಬಾಗ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವಿನಾಯಕ ಸೊಂಡೂರ, ಸಚೇಂದ್ರ ಲಂಬು, ಪರಶುರಾಮ ಪವಾರ, ರಾಹುಲ್ ಮಾನಕರ ಅವರನ್ನು ಸನ್ಮಾನಿಸಲಾಯಿತು.