ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ “
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೭; 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಕರ್ನಾಟಕ, ದಾವಣಗೆರೆ ವತಿಯಿಂದ ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ ಚಿಗಟೇರಿ  ಮಾರ್ಗದರ್ಶನದಲ್ಲಿ ಜಿಲ್ಲಾ ಸಂಸ್ಥೆ ವತಿಯಿಂದ ಕಾರ್ಗಿಲ್  ವಿಜಯೋತ್ಸವ ದಿವಸವನ್ನು ಅಮರ್ ಜವಾನ್ ಮೆಮೋರಿಯಲ್ ಪಾರ್ಕ್ ನಲ್ಲಿ  ಆಚರಿಸಲಾಯಿತು.ಗಡಿ ಕಾಯುವ ಯೋಧರಿಗೆ ಗಡಿಯೊಳಗಿನ ಪುಟ್ಟ ಕೈಗಳಿಂದ ನಮನವನ್ನು ಸಲ್ಲಿಸಲಾಯಿತು”1999 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದಲ್ಲಿ ಗೆದ್ದು ವೀರ ಯೋಧರು ಮತ್ತು  ಅಮರ ಮರಣ ಹೊಂದಿದ ದಿವಸ ಈ ಜುಲೈ 26 ಪ್ರತಿ ವರ್ಷ ಅವರ ನೆನಪಿಗಾಗಿ ಆಚರಿಸುತ್ತಾ ಬಂದಿದ್ದೇವೆ. ಇದು 25ನೇ ವರ್ಷಾಚರಣೆ ಆಗಿದೆ ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಎ ಪಿ ಷಡಕ್ಷರಪ್ಪನವರು ಮಕ್ಕಳಿಗೆ ಕಾರ್ಗಿಲ್ ವಿಜಯ ದಿವಸ್ ಬಗ್ಗೆ  ಮಾಹಿತಿಯನ್ನು ನೀಡಿದರು.
ಜಿಲ್ಲಾ ಸಹಾಯಕ ಆಯುಕ್ತರಾದ ಎನ್. ಕೆ. ಕೊಟ್ರೇಶ್ ವೀರಯೋಧರ ಸ್ಮಾರಕಕ್ಕೆ ಹೂವು ಗುಚ್ಛ ಸಮರ್ಪಿಸಿ ನಮನ ಸಲ್ಲಿಸಿದರು.ಮಾಜಿ ಯೋಧರಾದ ಸುರೇಶ್ಸಿ ದ್ದಗಂಗಾ ಶಾಲೆಯ ಸ್ಕೌಟ್ಸ್  ಮತ್ತು ಗೈಡ್ಸ ವಿದ್ಯಾರ್ಥಿಗಳು ಸ್ಮಾರಕಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕಗೌರವ ಸಲ್ಲಿಸಿದರು.ಜಿಲ್ಲಾ ಕಾರ್ಯದರ್ಶಿಗಳಾದ ಎಂ. ರತ್ನ.  ಸ್ಕೌಟ್ ಮಾಸ್ಟರ್ ದುರ್ಗಪ್ಪ ಮತ್ತು   ಗೈಡ್ ಕ್ಯಾಪ್ಟನ್ ದೀಪ, ಹಾಗೂ  ಯುವ ಸಮಿತಿ ಸದಸ್ಯರಾದ ಮುಸ್ತಫ, ದೀಪಕ್, ನವೀನ್. ಮತ್ತು ಎಸ್. ಜಿ. ವಿ. ಅಶ್ವಿನಿ. ಉಪಸ್ಥಿತರಿದ್ದರು.