ಇಗ್ನೋದಿಂದ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಸಂಜೆವಾಣಿ ವಾರ್ತೆದಾವಣಗೆರೆ.ಜು.೨೬: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದಾಲಯವು ಜುಲೈ-2024ರ ಸಾಲಿಗೆ ವಿವಿಧ ಪ್ರಮಾಣಪತ್ರ ಡಿಪ್ಲೋಮಾ, ಪಿಜಿ ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಬೆಂಗಳೂರು ಇಗ್ನೋ ರೀಜನಲ್ ಆಫೀಸ್ ನ ಸಹಾಯಕ ನಿರ್ದೇಶಕ ಡಾ. ಎಂ. ಷಣ್ಮುಗಂ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಬಿಎ ಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರ ಪ್ರವೇಶವನ್ನು ನೀಡಲಾಗುತ್ತದೆ ಎಸ್ಸಿ-ಎಸ್ಟಿ, ಓಬಿಸಿ ಮತ್ತು ದೈಹಿಕ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಸೌಲಭ್ಯ ವಿರುತ್ತದೆ ಎಂದರು.ಜುಲೈ-2024ನೇ ಸಾಲಿನಿಂದ ಇಗ್ನೋ ಎಂಬಿಎ, ಎಂಬಿಎ ಇನ್ ಕನ್ಟ್ರಕ್ಷನ್ ಮ್ಯಾನೇಜ್ಮೆಂಟ್, ಎಂಬಿಎ ಇನ್ ಲಾಜಿಸ್ಟಿಕ್ಸ್ ಮತ್ತು ಸಪ್ಲೇ ಚೈನ್ ಮ್ಯಾನೇಜ್ಮೆಂಟ್, ಎಂಬಿಎ ಇನ್ ಅಗ್ರಿಬ್ಯುಸಿನೆಸ್ ಮ್ಯಾನೇಜ್ಮೆಂಟ್, ಎಂಬಿಎ ಇನ್ ಹೆಲ್ತ್ ಕೇರ್ ಅಂಡ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್, ಪಿಜಿಡಿಡಿಆರ್ ಆರ್ ಎಂ, ಪಿಜಿ ಇನ್ ಡಿಪ್ಲೋಮಾ ಇನ್ ರಿಹ್ಯಾಬಿಟೇಷನ್ ಸೈಕಾಲಜಿ, ಡಿಹೆಚ್ ಒಆರ್ ಟಿ, ಸಿಇಎಸ್ ಇಐಹೆಚ್ ಐ, ಇತ್ಯಾದಿ ನೂತನ ಕೋರ್ಸ್ ಗೋಳನ್ನು ಆರಂಭಿಸಿದೆ ಎಂದರು.