ಕಾರ್ಗಿಲ್ ವಿಜಯೋತ್ಸವ – ಟಾರ್ಗೆಟ್ ಪಿಒಕೆ ರನ್
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೭; ಅಮರ್ ಜವಾನ್ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಮತ್ತು ಟಾರ್ಗೆಟ್ ಪಿಒಕೆ ರನ್ ಕಾರ್ಯಕ್ರಮದಲ್ಲಿ ಚಾಣಕ್ಯ ಕಾಲೇಜು, ಪ್ರೇರಣಾ ಅಕಾಡೆಮಿ ಹಾಗು ಯೂರೋ ಸ್ಕೂಲ್‌ನ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತೈದು ವರ್ಷಗಳ ಸ್ಮರಣಾರ್ಥ ಸಸಿಗಳನ್ನು ನೆಟ್ಟು ನಮ್ಮ ಮುಂದಿನ ಗುರಿ ಪಿಒಕೆ ಎಂದು ಘೋಷಣೆಗಳನ್ನು ಕೂಗಿ ದೇಶ ಪ್ರೇಮ ಮೆರೆದರು.