ಭಜನಗಾಯಕಿ  ಅಂಬುಜಾಕ್ಷಿಗೆ ರಾಜ್ಯಮಟ್ಟದ ‘ಭಜನ ಶಿರೋಮಣಿ’ ಪ್ರಶಸ್ತಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ: ಜು.೨7; ಗುರುಪೂರ್ಣಿಮೆ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ದಿನಾಂಕ 22-7-2024ರ ಸೋಮವಾರ ನಗರದ ಬ್ಯಾಂಕ್ ಕಾಲೋನಿ ಯೋಗ ಕೇಂದ್ರದಲ್ಲಿ ಸಂಜೆ ಹಮ್ಮಿಕೊಂಡಿದ್ದ ‘ಗುರುವಂದನಾ‘ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಶ್ರೀಮತಿ ಲಲಿತ ಬೇದ್ರೆ, ಸರ್ವದಾ, ಸುಭದ್ರಮ್ಮ, ಕವಿತಾಕವಾಡಿಗರಹಟ್ಟಿ, ಸಮಾಜಸೇವಕರಾದ ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್ ಸತ್ಯಣ್ಣ ಅವರನ್ನು ಸನ್ಮಾನಿಸಲಾಯಿತು. ಇದೇ ಸಂಧರ್ಭದಲ್ಲಿ ಹಲವಾರು ವರ್ಷಗಳಿಂದ ಚಿತ್ರದುರ್ಗ ಭದ್ರಾವತಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಜನೆಗಳನ್ನು ಹಾಡುವುದು ಮತ್ತು ಇತರರಿಗೆ ಉಚಿತವಾಗಿ ಕಲಿಸುತ್ತಾ ಸನಾತನ ಭಜನಾ ಕಲೆಯನ್ನು ಬೆಳೆಸಿಕೊಂಡು ಬಂದಿರುವ ಚಿತ್ರದುರ್ಗದ ಭಜನಾ ಗಾಯಕಿ ಶ್ರೀಮತಿ ಎಲ್ ಹೆಚ್ ಅಂಬುಜಾಕ್ಷಿ ಅವರಿಗೆ ರಾಜ್ಯಮಟ್ಟದ ‘ ಭಜನಾ ಶಿರೋಮಣಿ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಯೋಗಗುರು ರವಿ ಕೆ.ಅಂಬೇಕರ್ ಮಾತನಾಡಿ ಹಿಂದೂ ಧರ್ಮದ ಸನಾತನ ಕಲೆಗಳಾಗಿರುವ ಯೋಗ ಮತ್ತು ಭಜನೆ ಆರೋಗ್ಯ ದೃಷ್ಟಿಯಿಂದ ಒಂದೇ ಮುಖದ ಎರಡು ಮುಖಗಳಾಗಿದ್ದು ಭಜನೆ ಹಾಡುತ್ತಾ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಸುಧಾರಿಸುವುದರ ಜೊತೆಗೆ ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ. ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇಂತಹ ಅಮೂಲ್ಯ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಶ್ರೀಮತಿ ಅಂಬುಜಾಕ್ಷಿಯವರಿಗೆ ನಮ್ಮ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ರಾಜ್ಯಮಟ್ಟದ ‘ಭಜನ ಶಿರೋಮಣಿ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ ಭಾರತೀಯ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಹಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.