ಜು. 29ರಂದು ಪತ್ರಿಕಾ ದಿನಾಚರಣೆ: ವಾರ್ಷಿಕ ಪ್ರಶಸ್ತಿ ಪ್ರದಾನ
ಕಲಬುರಗಿ: ಜು.26: ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಜುಲೈ 29ರಂದು ಬೆಳಿಗ್ಗೆ 9-45ಕ್ಕೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಿಕೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದವರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸುವರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಮುಖ್ಯಮAತ್ರಿಗಳ ಮಾಧ್ಯಮ ಸಲಹಗಾರ ಕ.ವಿ. ಪ್ರಭಾಕರ್ ಅವರು ದಿಕ್ಸೂಚಿ ನುಡಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಅವರು ಆಶಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಡಾ. ಬಿ.ಜಿ. ಪಾಟೀಲ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ವಾರ್ತಾ ಇಲಾಖೆಯ ಉಪ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಮಾಲಿಬಿರಾದಾರ್ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಬಾಬುರಾವ್ ಯಡ್ರಾಮಿ ಅವರು ವಹಿಸುವರು ಎಂದು ಅವರು ಹೇಳಿದರು.
2024ನೇ ಸಾಲಿನ ದಿ. ವಿ. ಎನ್. ಕಾಗಲಕರ್ ಪ್ರಶಸ್ತಿಯನ್ನು ಪತ್ರಕರ್ತರಾದ ಹಣಮಂತರಾವ್ ಭೈರಾಮಡಗಿ, ದೇವಯ್ಯ ಗುತ್ತೇದಾರ್, ಶಾಮಕುಮಾರ್ ಸಿಂಧೆ, ಬಿ.ವ್ಹಿ. ಚಕ್ರವರ್ತಿ, ಮಲ್ಲಿಕಾರ್ಜುನ್ ನೈಕೋಡಿ, ಡಾ. ಶಿವರಂಜನ್ ಸತ್ಯಂಪೇಟೆ ಅವರಿಗೆ ಹಾಗೂ ದೃಶ್ಯ ಮಾಧ್ಯಮ ವಿಶೇಷ ಪ್ರಶಸ್ತಿಯನ್ನು ಸುದ್ದಿ ವಾಹಿನಿಯ ರಾಜಶೇಖರಯ್ಯ ಹೊಕ್ರಾಣಿಮಠ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ವಾರ್ಷಿಕ ಪ್ರಶಸ್ತಿಗಳನ್ನು ಪತ್ರಕರ್ತರಾದ ಶರಣಬಸಪ್ಪ ಜಿಡಗಾ, ಬಸವರಾಜ್ ಅ. ಚಿನಿವಾರ್, ವಿ.ವಿ. ದೇಸಾಯಿ, ಶ್ರೀಮತಿ ನಾಗಲಾಂಬಿಕಾ ರವಿ ಹೊನ್ನಾ, ಬಿಂದು ಮಾಧವರಾವ್ ಅಫಜಲಪುರ, ಭಜರಂಗಿ ನಿಂಬರಕರ್, ಪುರುಷೋತ್ತಮ್ ಕುಲಕರ್ಣಿ, ಶ್ರೀಮತಿ ಸುವರ್ಣಾ ಎಸ್. ದೊಡ್ಡಮನಿ, ರಾಘವೇಂದ್ರ ಶರ್ಮಾ, ರಾಜು ದೇಶಮುಖ್, ಶಾಂತಪ್ಪ ಕೋರೆ, ರವಿಶಂಕರ್ ಬುರ್ಲಿ, ವಿಜಯೇಂದ್ರ ಕುಲಕರ್ಣಿ, ರಾಚಪ್ಪ ಜಂಬಗಿ, ಈರಣ್ಣ ವಗ್ಗೆ, ಪ್ರಕಾಶ್ ದೊರೆ, ಸರ್ಫರಾಜ್, ವಿಶ್ವರಾಧ್ಯ ಹಂಗನಳ್ಳಿ, ಮೊಹ್ಮದ್ ಸಲೀಮುದ್ದೀನ್, ಕೃಷ್ಣ ಕುಲಕರ್ಣಿ, ಅಕ್ರಂ ಪಾಶಾ, ರವಿ ಜಾಲವಾದಿ, ಶೇಖ್ ಬಾಬಾ, ದೇವಿಂದ್ರಪ್ಪ ಜಡಿ, ಲಿಂಗರಾಜ್ ಸ್ವಾಮಿ, ಸುಧೀರ್ ಬಿರಾದಾರ್, ಮಲ್ಲಿಕಾರ್ಜುನ್ ಯಾದಗಿರಿ, ಶಾಮಸುಂದರ್ ಕುಲಕರ್ಣಿ, ಸುರೇಶ್ ಬಡಿಗೇರ್, ಶರಣಪ್ಪ ಎಳ್ಳಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವೆಂದ್ರಪ್ಪ ಅವಂಟಿ, ಸಂಗಮನಾಥ್ ರೇವತಗಾಂವ್, ಡಾ. ಶಿವರಂಜನ್ ಸತ್ಯಂಪೇಟೆ, ಬಾಬುರಾವ್ ಕೋಬಾಳ್ ಮುಂತಾದವರು ಉಪಸ್ಥಿತರಿದ್ದರು.