ಮಂಗಳಮುಖಿ ಕಲಾವಿದರಿಂದ ತಲ್ಕಿ ನಾಟಕ ಪ್ರದರ್ಶನ
ಕಲಬುರಗಿ: ಜು.26: ನಗರದ ರಂಗಾಯಣದಲ್ಲಿ ಜುಲೈ 27ರಂದು ಸಂಜೆ 6-30ಕ್ಕೆ ಹಿರಿಯ ಮಂಗಳಮುಖಿ ಕಲಾವಿದರಿಂದ ತಲ್ಕಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬೆಂಗಳೂರಿನ ಟ್ರುಥ್ ಡ್ರೀಮ್‌ನ ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 15 ಕಡೆಗಳಲ್ಲಿ ಪ್ರದರ್ಶನಗೊಂಡಿದ್ದು, 50 ವರ್ಷ ಮೇಲ್ಪಟ್ಟ ಮಂಗಳಮುಖಿ ಕಲಾವಿದರು ನಾಟಕ ಪ್ರದರ್ಶಿಸಲಿದ್ದಾರೆ ಎಂದರು.
ಟ್ರುಥ್ ಡ್ರೀಮ್ ಟ್ರಾನ್ಸ್ ಸಮುದಾಯದ ಮಂಗಳಮುಖಿಯರು ಕಂಡಿರುವ ಕನಸು ನಿಜವಾಗುವ ಒಂದು ಕಲ್ಪನೆ. ಜೀವನದಲ್ಲಿ ನೋವು, ಹಿಂಸೆ, ತಾರತಮ್ಯಗಳನ್ನು ಅನುಭವಿಸಿ ಬದುಕಿನ ದಾರಿಯನ್ನು ಸವಾಲಾಗಿ ತೆಗೆದುಕೊಂಡು ತಮ್ಮನ್ನು ತಾವೇ ಗೌರವದಿಂದ ಕಾಣುತ್ತ ಮುಂದೆ ಸಾಗಲು ಮಾಡುತ್ತಿರುವ ಹೋರಾಟಗಳ ನಡುವೆಯೂ ತಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊAಡು ಅದು ಯಾವತ್ತೋ ನನಸಾಗುತ್ತದೆ ಎಂಬ ಅವರ ಭರವಸೆಯ ರೂಪ ಎಂದರು.
ಕನಸುಗಳು ಬಹುತೇಕ ತಾವು ಎಳೆಯ ವಯಸ್ಸಿನಲ್ಲಿ ಇಷ್ಟಪಟ್ಟ ನಾಯಕಿಯರಾಗಿ ಬದಲಾಗುವ ಕನಸು. ತಮ್ಮ ಗುರುತಿಸುವಿಕೆಯನ್ನು ಅರಿತುಕೊಳ್ಳುವ ಮೊದಲನೇ ಹೆಜ್ಜೆ ಕೂಡ ಕನಸುಗಳು ಎಂಬುದು ವಿಶೇಷ. ಹಲವಾರು ಮಂಗಳಮುಖಿ ಕಲಾವಿದೆಯರು ಚಲನಚಿತ್ರರಂಗಗಳಲ್ಲಿ ಅಭಿನಯಿಸಬೇಕೆಂದುಕೊAಡರೂ ಸಹ ಅವರಿಗೆ ಅವಕಾಶ ಕೊಡುವುದಿಲ್ಲ. ಹೀಗಾಗಿ ನಾಟಕ ರಂಗಭೂಮಿಯ ಮೂಲಕ ಅವರು ತಮ್ಮ ಪ್ರದರ್ಶನ ಕೊಡುವರು ಎಂದು ಅವರು ಹೇಳಿದರು.
55 ವರ್ಷ ದಾಟಿದ ಸಮುದಾಯದವರನ್ನು ಆಹ್ವಾನಿಸಿ ತಮ್ಮ ಕನಸಿನ ನಾಯಕಿಯರಂತೆ ತಯಾರಾಗಿ, ಆ ಕನಸನ್ನು ಫೋಟೋ ಹಾಗೂ ಫೋಟೋ ಪ್ರದರ್ಶನದ ಮೂಲಕ ಶಾಶ್ವತಗೊಳಿಸುವ ಒಂದು ಸುಂದರ ಯತ್ನವೇ ಈ ನಾಟಕವಾಗಿದೆ. ಪಯಣ ಸಂಸ್ಥೆಯನ್ನು ಸ್ಥಾಪಿಸಿದ ರೆಜನಾಲ್ಡ್ ಅವರ ಮೊದಲನೇ ಪುಣ್ಯ ಸ್ಮರಣೆಯ ಅಂಗವಾಗಿ 2021ರಲ್ಲಿ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಒಂದು ನೃತ್ಯ ಪ್ರದರ್ಶನ ಹಾಗೂ ಫೋಟೋ ಎಕ್ಸಿಬಿಷನ್ ಮೂಲಕ ಉದ್ಘಾಟಿಸಿದರು ಎಂದು ಅವರು ಹೇಳಿದರು.
ಲೈಂಗಿಕತ ಅಲ್ಪಸಂಖ್ಯಾತ ಸಮುದಾಯದವರು ಅತೀ ಹಚ್ಚು ಪ್ರೀತಿಸುವ, ಮಾಂಸದಿAದ ತಯಾರು ಮಾಡುವ ಆಹಾರ ಪದಾರ್ಥದ ಹೆಸರು ತಲ್ಕಿ. ಸಾಂಸ್ಕೃತಿಕ ಚಿತ್ರಣದ ಅಂಗವಾಗಿ ಆಹಾರ ಮಾತ್ರವಲ್ಲದೇ ಯಾವುದೇ ಲಿಪಿಯಲ್ಲಿ ಇಲ್ಲದ ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರು ಬಳಸುವ ಭಾಷೆ ವಿಶೇಷವಾಗಿ ಎದ್ದು ಕಾಣುತ್ತದೆ ಎಂದು ಅವರು ತಿಳಿಸಿದರು.
ನಾಟಕದಲ್ಲಿ ನಟಿಯರಾಗಿ ಶಾಂತಮ್ಮ, ಲಕ್ಷಿö್ಮÃಯಮ್ಮ, ರೇವತಿ, ಭಾನಮ್ಮ, ಶೋಭನಾ ಕುಮಾರಿ, ಸರವನ, ಚಾಂಚಿನಿ ಅವರು ಅಭಿನಯಿಸುವರು. ಶ್ರೀಜಿತ್ ಸುಂದರA ಅವರು ನಿರ್ದೇಶಕರಾಗಿ, ರೇವತಿ ಏ., ಅವರು ಸಹಾಯಕ ನಿರ್ದೇಶಕಿಯಾಗಿದ್ದು, ಚಾಂಚಿನಿ, ತ್ರಿಮೂರ್ತಿ ಅವರು ನಿರ್ವಹಣೆ ಮಾಡಲಿದ್ದಾರೆ. ರೇವಂತ್ ಆರ್. ಮಾಳಗೆ ಅವರು ಸಹ ನಿರ್ದೇಶನ, ಏ. ವಿಠಲ್ ಅವರು ಸೆಟ್ ಡಿಸೈನ್, ಲೈಟಿಂಗ್ ಡಿಸೈನ್, ಶ್ರೀಜಿತ್ ಸುಂದರA, ಸಂಕೀರ್ತಿ ಅವರು ವಸ್ತç ವಿನ್ಯಾಸ, ರಫೀಕ್ ಇಸ್ಮಾಯಿಲ್, ಸುಮಿ ಅವರು ಪೋಸ್ಟರ್ ಡಿಸೈನ್, ಕೌಶಲ್ಯ ಶಂಕರ್ ಅವರು ಮೇಕಪ್, ಸಂದೀಪಕುಮಾರ್ ಅವರು ಸಂಗೀತ ಸಂಯೋಜನೆಯನ್ನು, ಮದನ್ ಅವರು ಸಂಗೀತ ನಿರ್ವಹಣೆಯನ್ನು, ಅನೀಶ್ ಅವರು ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೇವತಿ, ಶ್ರೀಜಿತ್ ಸುಂದರA ಮುಂತಾದವರು ಉಪಸ್ಥಿತರಿದ್ದರು.