ಜಾನಪದದಲ್ಲಿದೆ ಬದುಕಿನ ಸತ್ವ
ಕಲಬುರಗಿ:ಜು.26: ಜನರಿಂದ, ಜನರಿಗಾಗಿ, ಸಾಮಾನ್ಯ ಜನರೇ ರಚಿಸಿದ ಸಾಹಿತ್ಯ ಜನಪದವಾಗಿದ್ದು, ಶಿಷ್ಟ ಸಾಹಿತ್ಯಕ್ಕೆ ತಾಯಿಬೇರಾಗಿದೆ. ಇದು ಜೀವನದ ಮೌಲ್ಯಗಳು, ಬದುಕುವ ಕಲೆ, ಜೀವನದ ವಾಸ್ತವಿಕತೆಯನ್ನು ಕಲಿಸಿಕೊಡುತ್ತದೆ. ದೇಶದ ಮೂಲ ಸಂಸ್ಕೃತಿಯಾದ ಜನಪದವು ಬದುಕಿನ ಸತ್ವವನ್ನು ಹೊಂದಿದೆ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರು ಕೂಡಾ ನಮ್ಮತನ ಮರೆಯಬಾರದು ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಎಚ್. ಹೇಳಿದರು.
ಸೇಡಂ ತಾಲೂಕಿನ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಶಾಲೆಯತ್ತ ಜಾನಪದ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿAಗಪ್ಪ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡುತ್ತಾ, ಜನಪದ ಸಂಸ್ಕೃತಿಯ ಅಳವಡಿಕೆಯಿಂದ ಇಂದಿನ ಒತ್ತಡದ ಬದುಕಿಗೆ ನೆಮ್ಮದಿ ದೊರೆಯುತ್ತದೆ. ಜನಪದರು ನಿಸರ್ಗ ತತ್ವ ಪ್ರತಿಪಾದಕರು. ಟಿ.ವಿ, ಮೋಬೈಲ್ ಹಾವಳಿಯಲ್ಲಿ ಜನಪದವನ್ನು ಮರೆತರೆ, ದೇಶದ ಸಂಸ್ಕೃತಿಗೆ ದಕ್ಕೆ ಬರುತ್ತದೆ. ನಮ್ಮತನ, ಹೃದಯ ಶ್ರೀಮಂತಿಕೆ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊಡುವ, ನಮ್ಮ ದೇಶದ ಮೂಲ ಸಂಸ್ಕೃತಿ, ಪರಂಪರೆಯಾದ ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ರಂಗಭೂಮಿ ಕಲಾವಿದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಸಮಾಜ ಸೇವಕ ಶಾಮರಾವ ಭರತನೂರ, ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ಎಸ್.ಗದ್ಯಾಳ್, ಸಿಬ್ಬಂದಿಗಳಾದ ಗೋಪಾಲದಾಸ, ಲೋಹಿತ್, ರಾಜೇಶ್ ಧನವೇ, ಉಮೇಶ್ ವಿ.ಕೆ, ಅಶ್ವಿನಿ ಮಾಳಗೆ, ವಿಜಯಕುಮಾರ, ನಿಸಾರ ಅಹ್ಮದ್, ಸಚಿನ್ ಪವಾರ, ರೇವಣಸಿದ್ದ ಪಾಟೀಲ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.