ಶಾಲೆ ಮೇಲ್ಚಾವಣಿ ಕುಸಿತ ಡಿಡಿಪಿಐ ವರದಿ ತರಿಸಿಕೊಂಡ ಸಂಸದೆ  ಡಾ. ಪ್ರಭಾ ಮಲ್ಲಿಕಾರ್ಜುನ್.*
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೬; ಉತ್ತರ ವಲಯ ವ್ಯಾಪ್ತಿಯ ಕರೂರ್ ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿದಿದೆ ಎಂಬ ಮಾಹಿತಿ ತಿಳಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಡಿಡಿಪಿಐ ರವರಿಂದ ಪ್ರಕರಣದ ಕುರಿತು ಮಾಹಿತಿ ಪಡೆದರು.ಶಾಲೆಯ ಕಟ್ಟಡವು ಶಿಥಿಲಗೊಂಡಿದ್ದು ಕಳೆದ ಎರಡು ವರ್ಷಗಳಿಂದ ಆ ಕಟ್ಟಡದಲ್ಲಿ ತರಗತಿ ನಡೆಸುತ್ತಿರಲಿಲ್ಲ ಇಂದು ಸ್ಥಳಕ್ಕೆ ಭೇಟಿ ನೀಡಿದ ನಂತರ ಡಿಡಿಪಿಐ ಕೊಟ್ರೇಶ್ ರವರು ಸಂಸತ್ ಅದಿವೇಶನದಲ್ಲಿ ಭಾಗವಹಿಸಲು ನವದೆಹಲಿಯಲ್ಲಿರುವ ಸಂಸತ್ ಸದಸ್ಯೆ  ಡಾ. ಪ್ರಭಾ ಮಲ್ಲಿಕಾರ್ಜುನ್ ರವರಿಗೆ ಮಾಹಿತಿ ನೀಡಿದರು.