ಪಂ. ಪಂಚಾಕ್ಷರಿ ಗವಾಯಿಗಳವರ ಪುಣ್ಯಸ್ಮರಣೆ-  ಗುರು ಗುಣಗಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೬; ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಮಹಿಳಾ ಘಟಕದ ವತಿಯಿಂದ  ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಗುರು ಗುಣಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷರಾದ ಶರಣೆ ಸೌಮ್ಯ ಸತೀಶ್  ಆಯೋಜಿಸಿದ್ದರು ನಂತರ ಮಾತನಾಡಿದ ಅವರು ಪಂಚಾಕ್ಷರಿ ಗವಾಯಿಗಳ ಕುರಿತು  ನಮಗೆ ಗುರು ಏಕೆ ಮತ್ತು ಹೇಗೆ  ಮುಖ್ಯ ಎಂದು ಹೇಳಿದರು. ಅವರ ವಚನಗಳನ್ನು ಕಲಿಯಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸದಸ್ಯರು ಗುರುವಿನ ಬಗ್ಗೆ ಒಂದೊಂದು ವಚನ ಹಾಗೂ ಹಾಡು ಹೇಳುವುದರ ಮೂಲಕ ಗುರು ನಮನ ಸಲ್ಲಿಸಿದರು. ಸದಸ್ಯರಿಗೆ ವಚನ ಜೋಡಣೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶರಣೆ ಲತಾ ಕಪ್ಪಾಳಿ  ಬಹುಮಾನ ಗಳಿಸಿದರು.  ಶರಣೆ ಮಮತಾ ನಾಗರಾಜ್  ಗುರುವಿನ ಘನತೆ ಮತ್ತು ಮಹಿಮೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಂತ ಶಿವಶಂಕರ್ ರತ್ನ ಕಾಟ್ವೆ, ನಿರ್ಮಲಾ, ಗೀತಾ ಸುಧಾ, ದೀಪ ಕಿರಣ್, ರಾಜಶ್ರೀ,  ರತ್ನ, ಸೀಮಾ, ಸುಮಾ ಕೊಟ್ರೇಶ್, ಮಧುಮತಿ, ತನುಜಾ ಮುಂತಾದವರು ಭಾಗವಹಿಸಿದ್ದರು.