ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ, ಇಂಜೆಕ್ಷನ್ ,ಮಾತ್ರೆ ಇಲ್ಲದೆ ನಾಗರಿಕರು  ಪರದಾಟ
ಸಂಜೆವಾಣಿ ವಾರ್ತೆ
ಹರಿಹರ  ಜು 26;  ಸಾರ್ವಜನಿಕ  ಆಸ್ಪತ್ರೆಯಲ್ಲಿ  ಗುಳಿಗೆ  ಇಂಜೆಕ್ಷನ್ ಮಾತ್ರೆಗಳು ದಾಸ್ತಾನು ಕೊರತೆ ಎದ್ದು ಕಾಣುತ್ತದೆ ಇದರಿಂದ  ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲ್ಲೂಕು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಳಿತ ವೈದ್ಯಾಧಿಕಾರಿ ಅಬ್ದುಲ್ ಖಾದರ್ ಇವರಿಗೆ  ಮನವಿ ನೀಡಿದರುಆಸ್ಪತ್ರೆಯನ್ನು ಅವಲಂಬಿಸಿಕೊಂಡು ನಂಬಿ ಬರುವ ಬಡ ರೋಗಿಗಳಿಗೆ ತೊಂದರೆ ಆಗುತ್ತದೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಳಿಗೆ ಇಂಜೆಕ್ಷನ್ ಇತರ ಔಷಧಿಗಳು ಆಸ್ಪತ್ರೆಯಲ್ಲಿ ಇಲ್ಲ ಎಂದರೆ ಖಾಸಗಿ ಮೆಡಿಕಲ್ ಹೋಗಿ ತರುವಷ್ಟು ಬಡ ಮಧ್ಯಮ ವರ್ಗದವರಿಗೆ ಆಗುವುದಿಲ್ಲ ಆಸ್ಪತ್ರೆ ಆಡಳಿತ ಮುಖ್ಯ ವೈದ್ಯಾಧಿಕಾರಿಗಳು ನಿರ್ಲಕ್ಷ ವಹಿಸುವುದನ್ನು ಬಿಟ್ಟು  ಕೂಡಲೇ ಆಸ್ಪತ್ರೆಯಲ್ಲಿ ಔಷಧಿ ಇಂಜೆಕ್ಷನ್ ಮಾತ್ರೆಗಳು ಸಾರ್ವಜನಿಕರಿಗೆ ದೊರಕುವಂತೆ ಮಾಡಬೇಕು ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಇತರೆ  ಟೆಸ್ಟಿಂಗ್ ಯಂತ್ರಗಳನ್ನು ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲತೆಗಳನ್ನು ಮಾಡಿಕೊಡಬೇಕೆಂದು ಸಂಘಟನೆ ಆಗ್ರಹಿಸಿತು.ಈ ಸಂದರ್ಭದಲ್ಲಿ  ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮ ನಾಯ್ಕ್ .ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷರು ಎಸ್. ಗೋವಿಂದ್  ಉಪಾಧ್ಯಕ್ಷರಾದ ಎಂ. ಆರ್. ಆನಂದ್  ಪ್ರಧಾನಕಾರ್ಯದರ್ಶಿ ಸುನಿಲ್  ಕುಮಾರ್ ಸಿ.ಎಚ್.ಗ್ರಾಮ ಘಟಕದ ಅಧ್ಯಕ್ಷ ಭರತ್  ಭಾನುವಳ್ಳಿ  ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್. ದಾದಾಪೀರ್ .ಯೋಗೇಶ್. ಆದರ್ಶ್ ಸುದೀಪ್. ಮಹಾರುದ್ರ .ರಿಯಾಜ್  ರವಿ. ಪ್ರದೀಪ್ .ಗಿರಿ.ಹನುಮಂತ ಉಪಸ್ಥಿತರಿದ್ದರು