ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕಲಬುರಗಿ:ಜು.26:ಕಲಬುರಗಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಇದೇ ಜುಲೈ 30 ರಂದು ಜೇವರ್ಗಿ ಹಾಗೂ ಆಳಂದ ತಹಶೀಲ್ದಾರರ ಕಚೇರಿಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಕಲಬುರಗಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆ್ಯಂಟನಿ ಜಾನ್ ಜೆ.ಕೆ. ಅವರು ತಿಳಿಸಿದ್ದಾರೆ.
ಕಲಬುರಗಿ ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಯವರಾದ ಮಂಜುನಾಥ.ಕೆ ಗಂಗಲ್ (ಮೊಬೈಲ್ ಸಂಖ್ಯೆ 9364062570) ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಅಕ್ಕಮಹಾದೇವಿ (ಮೊಬೈಲ್ ಸಂಖ್ಯೆ 9364062670) ಅವರು ಇದೇ ಜುಲೈ 30 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಜೇವರ್ಗಿ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಕಲಬುರಗಿ ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಯವರಾದ ಗೀತಾ ಟಿ. ಬೇನಹಾಳ (ಮೊಬೈಲ್ ಸಂಖ್ಯೆ 9364062569), ಪೊಲೀಸ್ ನಿರೀಕ್ಷಕ ರಾಜಶೇಖರ ವಿ. ಹಳಿಗೋದಿ (ಮೊಬೈಲ್ ಸಂಖ್ಯೆ 9364062671) ಹಾಗೂ ಪೊಲೀಸ್ ನಿರೀಕ್ಷಕ ಧ್ರವತಾರ ಸಿ. (ಮೊಬೈಲ್ ಸಂಖ್ಯೆ 9364062669) ಅವರು ಇದೇ ಜುಲೈ 30 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆಳಂದ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದರೆ ಕಾರಣ ಇಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಥವಾ ಕಚೇರಿಗೆ ಅಲೆದಾಡಿಸುತ್ತಿದ್ದಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದ್ದಲ್ಲಿ ಕಲಬುರಗಿ ಕರ್ನಾಟಕ ಲೋಕಾಯುಕ್ತರ ಗಮನಕ್ಕೆ ತರಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಚೇರಿ, ಐವಾನ್ ಶಾಹಿ, ಕಂಪೌAಡ್, ಕಲಬುರಗಿ-585102 ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-295364ಗೆ ಸಂಪರ್ಕಿಸಲು ಕೋರಲಾಗಿದೆ.