ಮುಖ್ಯಮಂತ್ರಿಯವರ ಸಲಹೆಗಾರರ ಪ್ರವಾಸ
ಕಲಬುರಗಿ:ಜು.26:ಮುಖ್ಯಮಂತ್ರಿಯವರ ಸಲಹೆಗಾರರು ನೀತಿ ಮತ್ತು ಕಾರ್ಯಕ್ರಮ ಹಾಗೂ ಆಳಂದ ಶಾಸಕರಾದ ಬಿ.ಆರ್.ಪಾಟೀಲ ಅವರು ಜುಲೈ 27 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನೆಹರು ಗಂಜ್‌ದಲ್ಲಿರುವ ಎ.ಪಿ.ಎಂ.ಸಿ. ಆವರಣದಲ್ಲಿ ಕಲಬುರಗಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಏರ್ಪಡಿಸಲಾದ “ಕೃಷಿ ಜಾತ್ರೆ” ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.