ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ ಸೂಚನೆ
ಕಲಬುರಗಿ:ಜು.26: ೨೦೨೩-೨೪ ನೇ ಸಾಲಿನ ಹದಿನಾರು ಪ್ರಕರಣ ದಾಖಲಿಸಿದ್ದು, ಪ್ರಸುತ್ತ ೨೦೨೪-೨೫ ನೇ ಸಾಲಿನಲ್ಲಿ ೧೭ ಬಾಲಕಾರ್ಮಿಕರನ್ನು ಗುರುತಿಸಿ ೩ ಪ್ರಕರಣ ಎಫ್.ಐ.ಆರ್. ದಾಖಲಿಸಿದ್ದು ಉಳಿದ್ದು ೧೪ ಪ್ರಕರಣಗಳು ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಮಾಲೀಕರ ಮೇಲೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸೊಸೈಟಿ ವಿವಿಧ ಸಮಿತಿಗಳ ಸಭೆ ಹಾಗೂ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣಗಳು ಹೆಚ್ಚು ಮಾಡುವುದಕ್ಕಿಂತ ಸಮಸ್ಯೆಗಳು ಇದ್ದಂತಹ ಜಾಗದಲ್ಲಿ ನಡೆಯುವಂತಹ ಪ್ರಕರಣಗಳನ್ನು ಸರಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅವರು ತಿಳಿಸಿದರು.
ಬಾಲಕಾರ್ಮಿಕರ ಬಗ್ಗೆ ಪ್ರಚಾರ: ಎಲ್ಲ ಸಿನಿಮಾಗಳಲ್ಲಿ ಹಾಗೂ ಸಿನಿಮಾ ಮಂದಿರಗಳಲ್ಲಿ ಸಾರ್ವಜನಿಕರ ಓಡಾಡುವಂತಹ ಸ್ಥಳಗಳಲ್ಲಿ ಬಸ್‌ಗಳ ಮೇಲೆ ಪೋಸ್ಟರ್‌ಗಳನ್ನು ಹಂಚುವುದು ಪ್ರತಿ ಗ್ರಾಮ ಪಂಚಾಯತ ಸಭೆಗಳಲ್ಲಿ ಅರಿವು ಮೂಡಿಸುವುದು ಮಾಸ್ಟರ ಬೈಲಾಸ ೩೧ ಜಿಲ್ಲೆಯಲ್ಲಿ ಪ್ರೋಜೆಕ್ಟ್ ಮಾಡುವುದು ಎಂದು ಸಭೆಯಲ್ಲಿ ಹೇಳಿದರು.
ಎಸ್.ಸಿ.ಪಿ/ ಟಿಎಸ್.ಪಿ: ಯೋಜನೆಯಡಿಯಲ್ಲಿ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ ತಿದ್ದುಪಡಿ ೨೦೧೬”ರ ಕುರಿತು ಕಾನೂನು ಅರಿವು ನೆರವು ಮಾಡುವುದು ಹಾಗೂ ಆಹಾರಧಾನ್ಯ ಮತ್ತು ಮಕ್ಕಳ ಕೀಟ್ ಕೊಡುವುದು ಎಂದು ಬಾಲಕಾರ್ಮಿಕರ ನಿರ್ದೇಶಕ ಸಂತೋಷ ಕುಲಕರ್ಣಿ ಅವರು ಹೇಳಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಫೇಲ್ ಆದ ಮಕ್ಕಳು: ಹೆಚ್ಚು ಬಾಲಕಾರ್ಮಿಕ ಕೆಲಸಕ್ಕೆ ಸೇರಿದ್ದಾರೆ ಕೆಲಸ ಮಾಡಲು ವಲಸೆ ಹೋದ ಮಕ್ಕಳ ಸಂಖ್ಯೆ ಹೆಚ್ಚು ಆಗಿದೆ ಹಾಗೂ ಬಡತನದಲ್ಲಿ ಸಿಲುಕಿದ ಕುಟುಂಬದ ಮಕ್ಕಳು ಹೆಚ್ಚಾಗಿದ್ದಾರೆ ಎಂದು ಎನ್.ಜಿ.ಓ. ಕಾರ್ಯದರ್ಶಿ ಶಾರದಾ ಯಾಕಾಪೂರ ಸಭೆಯ ಗಮನಕ್ಕೆ ತಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಅವರಿಗೆ ಜಿಲ್ಲಾಧಿಕಾರಿ ಮಾತನಾಡಿ, ತಾವು ಎನ್.ಜಿ.ಓ. ಅಥವಾ ಶಿಕ್ಷಕರಿಂದ ಸಭೆ ಕರೆದು ಅವರಿಗೆ ಮಾರ್ಗದರ್ಶನ ನೀಡಬೇಕು. ಶಾಲೆಯಿಂದ ವಲಸೆ ಹೋದ ಮಕ್ಕಳ ಮನೆಗೆ ಹೋಗಿ ಅವರನ್ನು ಕರೆತಂದು ಶಿಕ್ಷಣಕ್ಕೆ ಸೇರಿಸಲು ಸೂಚಿಸಿದರು.
ಗಂಗಾನಗರದಲ್ಲಿ ೧೫ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಆಟೋ ಚಾಲನೆ ಮಾಡುತ್ತಿದ್ದು, ಶಿಕ್ಷಣದಿಂದ ವಂಚಿತರಾಗಿರುತ್ತಾರೆ ಸದರಿ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿ ದಾಖಲಿಸಲು ಹಾಗೂ ಬಬಲಾದ ಮತ್ತು ಸುಲ್ತಾನಪೂರ ರಸ್ತೆಯಲ್ಲಿ ಇಟ್ಟಂಗಿ ಭಟ್ಟಿಗಳಲ್ಲಿ ತಂದೆ ತಾಯಿ ಪೋಷಕರೊಂದಿಗೆ ಶಾಲೆ ಬಿಟ್ಟು ಕೆಲಸ ನಿರ್ವಹಿಸುತ್ತಿರುವ ಕಂಡುಬAದಿದ್ದು ಸದರಿ ಮಕ್ಕಳ ಹಾಜರಾತನ್ನು ಪರಿಶೀಲಿಸಿ ನಿರಂತರ ಶಾಲೆಗೆ ಹೋಗಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕೆಂದು ಬಾಲಕಾರ್ಮಿಕ ಸಮಿತಿ ಯೋಜನಾ ಸೋಸೈಟಿ ಸಮಿತಿ .ಸದಸ್ಯರಾದ ಪ್ರಭುದೇವ ಯಳಸಂಗಿ ಮನವಿ ಮಾಡಿದರು.
ಗಿಗ್ ಕಾರ್ಮಿಕರ ವಿಮಾ ಯೋಜನೆ ನೋಂದಣಿ: ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮ್ ಯೋಜನೆಯ ದೇಶದಲ್ಲಿ ಮೊದಲ ಜಾರಿಗೆ ತಂದಿದ್ದು, ಎಲ್ಲಾ ಅರ್ಹ ಗಿಗ್ ಅರ್ಹ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳವುದು ವಿಮಾ ಸೌಲಭ್ಯವು ಕರ್ತವ್ಯದಲ್ಲಿರುವಾಗ/ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯ, ಯೋಜನೆ ಸಂಪೂರ್ಣ ಉಚಿತ ಯಾವುದೇ ರಈತಿಯ ಪ್ರೀಮಿಯಂ ಪಾವತಿಸುವ ಅಗತ್ಯತೆ ಇಲ್ಲ ಎಂದು ಜಿಲ್ಲಾ ಬಾಲಕಾರ್ಮಿಕ ಅಧಿಕಾರಿ ಶರಣಪ್ಪ ಹಳ್ಳಿ ಮನಿ ತಿಳಿಸಿದರು.
ನೋಂದಣೆಗೆ ಅರ್ಹ ಕಾರ್ಮಿಕರು:- ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರು.
ಗಿಗ್ ನೋಂದಣಿಗೆ ಅರ್ಹತೆ: ೧೮ ರಿಂದ ೬೦ ವಯೋಮಾನದವರು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು. ಕರ್ನಾಟಕದಲ್ಲಿ ಗಿಗ್ ವೃತ್ತಿ (ಡೆಲಿವರಿ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ.
ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. ೨ ಲಕ್ಷ ಹಾಗೂ ಜೀವ ವಿಮಾ ರೂ ೨ ಲಕ್ಷ ಒಟ್ಟು ಸೇರಿ ಒಟ್ಟು ರೂ. ೪ ಲಕ್ಷ ಇದಾಗಿದೆ. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ ೨ ಲಕ್ಷಗಳವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ. ೧ ಲಕ್ಷಗಳವರೆಗೆ (ಅಪಘಾತ ಪ್ರಕರಣಗಳೀಗೆ ಮಾತ್ರ) ಜೀವ ವಿಮಾ ರೂ. ೨ ಲಕ್ಷ ಇರುತ್ತದೆ ಎಂದು ಸಭೆಯಲ್ಲಿ ವಿವರಿಸಿದರು.
ಅವಶ್ಯಕ ದಾಖಲೆಗಳು: ಆಧಾರ್ ಸಂಖ್ಯೆ. ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ/ ವೇತನ ಚೀಟಿ/ವೇತನ ಪಡೆದ ಬ್ಯಾಂಕ್ ಪಾಸ್ ಬುಕ್. ಇ-ಶ್ರಮ್ ನೋಂದಣಿ ಸಂಖ್ಯೆ ಇಲ್ಲವಾದಲ್ಲಿ www.eshram.gov.in ಅಲ್ಲಿ ನೋಂದಾಯಿಸಿ ಪಡೆದುಕೊಳ್ಳುವುದು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ್, ಡಿ.ಎಸ್.ಪಿ.ಬಿಂದುರಾಣಿ ಸಹಾಯಕ ಆಯುಕ್ತೆ ರೂಪೇಂದ್ರ ಕೌರ, ಸೇರಿದಂತೆ ಸಹಾಯಕ ಕಾರ್ಮಿಕ ಆಯುಕ್ತ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಮಹ್ಮದ್ ಬಶೀರ್ ಅನ್ಸಾರಿ, ಸಭೆಯಲ್ಲಿ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ. ಫಾದರ್ ಟಾಮ್, ಬಿ.ಎಮ್.ಎಸ್. ಯುನಿಯನ್, ಗೀತಾ ಕುಲಕರ್ಣಿ, ಎ.ಐ.ಟಿ.ಯು.ಸಿ ಪ್ರಭುದೇವ ಯಳಸಂಗಿ, ಸಮಾಜ ಕಾರ್ಯಕರ್ತ ಶಿವಕುಮಾರ ರೇಷ್ಮೀ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ, ವಿಠ್ಠಲ ಚಿಕಣಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದರು.