ಸಮಾಜ ಬೆಂಕಿ ಹತ್ತಿ ಉರಿಯುತ್ತಿರುವುದು ಕಾಣುತ್ತಿಲ್ಲವೇ ?: ದಿವ್ಯಾ ಹಾಗರಗಿ
ಕಲಬುರಗಿ,ಜು.26-ಶರಣು ಮೋದಿ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲು ಪಣ ತೊಟ್ಟು ಅವಿರೋಧ ಆಯ್ಕೆ ಮಾಡಿದ ಪ್ರಮುಖರು ಮತ್ತು ಸಮಾಜದ ಜನಪ್ರತಿನಿಧಿಗಳು ಎಲ್ಲಿದ್ದಾರೆ ? ಸಮಾಜಕ್ಕೆ ಬೆಂಕಿ ಹತ್ತಿ ಉರಿಯುತ್ತಿರುವುದು ಅವರಿಗೆ ಕಾಣುತ್ತಿಲ್ಲವೆ ಅಥವಾ ಕಂಡು ಕಾಣದಂತೆ ಜಾಣ ಕುರುಡು ನಡೆಯನ್ನು ಅನುಸರಿಸುತ್ತಿದ್ದಾರೆಯೇ ಎಂದು ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಎಲ್ಲರ ಸಲಹೆಯಂತೆ ಕಣದಿಂದ ಹಿಂದೆ ಸರಿದ ಅಭ್ಯರ್ಥಿ ದಿವ್ಯಾ ಹಾಗರಗಿ ಕೆಂಡ ಕಾರಿದ್ದಾರೆ.
ಚುನಾವಣಾದಧಿಕಾರಿಗಳಾದ ಶರಣಬಸ್ಸಪ್ಪಾ ಕಾಡಾದಿ ಅವರು ಪಾರದರ್ಶಕ ವ್ಯಕ್ತಿತ್ವ ಹೊಂದಿದವರು. ಅವರ ಬಗ್ಗೆ ಯಾವುದೇ ಅಸಮಧಾನನವಿಲ್ಲ. ಅವರ ಗಮನಕ್ಕಿಲ್ಲದೆ ಕೆಲವು ಪ್ರಮಾದ ನಡೆದಿರಬಹುದು.
ನಮ್ಮ ಹೋರಾಟ ಏನಿದ್ದರೂ ದಿವ್ಯಾ ಹಾಗರಗಿ, ಶಶಿಕಾಂತ ಪಾಟಿಲರನ್ನು ಕಣದಿಂದ ಹಿಂದೆ ಸರಿಸಿ ಇವತ್ತು ಸಮಾಜಕ್ಕೂ ನಮಗೆ ಸಂಬAಧವಿಲ್ಲದAತಿರುವ ಸಭೆಯಲ್ಲಿದ್ದ ಎಲ್ಲ ಪ್ರಮುಖರ ಮತ್ತು ಅಧ್ಯಕ್ಷರ ವಿರುದ್ದ. ಸಾಮಾಜಿಕ ನ್ಯಾಯ ಸಿಗುವವರೆಗು ಹೋರಾಟ ಮುಂದುವರೆಯಲಿದೆ.
ಶರಣು ಮೋದಿಯವರ ಸರ್ವಾಧಿಕಾರಿ ಧೋರÀಣೆ ಮಟ್ಟ ಹಾಕಲೂ ಪಾಳಾದ ಗುರುಮೂರ್ತಿ ಶಿವಾಚಾರ್ಯರನ್ನು ಜಿಲ್ಲಾ ಗೌರವ ಅಧ್ಯಕ್ಷರನ್ನಾಗಿ, ಬಸವೇಶ್ವರ ಪುತ್ಥಳಿ ಅಭಿವೃದ್ದಿಗೆ, ವಿದ್ಯರ್ಥಿನಿಯರ ಮಹಿಳಾ ವಸತಿ ನಿಲಯಕ್ಕೆ ಅಪಾರ ದೇಣಿಗೆ ನಿಡಿದ ಮತ್ತು ಸಮಾಜಕ್ಕಾಗಿ ದೂಡಿಯಲು ಉತ್ಸುಕರಾಗಿರುವ ಆನಂದ ಪಾಟೀಲ ಸರಡಗಿ ಅಥವಾ ಯಾವುದೇ ಸ್ಥಾನ ಮಾನದ ಆಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ದುಡಿಯುವ ಪ್ರಶಾಂತ ಗುಡ್ಡಾ ಅವರಲ್ಲಿ ಯಾರನ್ನಾದರು ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಸರ್ವಾಧಿಕಾರಕ್ಕೆ ಮೂಗುದಾರ ಹಾಕಿ.
-ದಿವ್ಯಾ ಹಾಗರಗಿ