ಕಾರ್ಗಿಲ್ ಯುದ್ಧದ ರಜತಮಹೋತ್ಸವ
ಕಲಬುರಗಿ,ಜು.26-ನಗರದಲ್ಲಿ ಇಂದು ಕಾರ್ಗಿಲ್ ಯುದ್ಧದ ರಜತಮಹೋತ್ಸವವನ್ನು ಆಚರಿಸಲಾಯಿತು.
ಬೆಳಿಗ್ಗೆ ನಗರದ ಗೋದುತಾಯಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಮರ್ ಜವಾನ್ ಸ್ಮಾರಕಕ್ಕೆ ಗೌರವ ಸಮರ್ಪಣೆ ಸಲ್ಲಿಸಿದರು. ಜಿಲ್ಲೆಯ ಮಾಜಿ ಸೈನಿಕರು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಹುಮನಾಬಾದ ಬೇಸ್ (ಕಿರಾಣಾ ಮಾರ್ಕೆಟ್)ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜೈ ಘೋಷಣೆ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಹುಮನಾಬಾದ ಬೇಸ್‌ದಿಂದ ನಗರದ ಜಗತ್ ವೃತ್ತದವರೆಗೆ ಪಥ ಸಂಚಲನ ನಡೆಯಿತು. ಮಾಜಿ ಸೈನಿಕ ಸೋಮಶೇಖರಯ್ಯ ಮಠಪತಿ, ಸಮಾಜ ಸೇವಕಿ ಡಾ.ಸುಧಾ ಹಾಲಕಾಯಿ, ಜಿಲ್ಲೆಯ ಮಾಜಿ ಸೈನಿಕರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.