ತೊಗರಿಗೆ ಉತ್ತೇಜನ ನೀಡಲು ವಿಶೇಷ ಯೋಜನೆಯಿಲ್ಲ
ಕಲಬುರಗಿ,ಜು.26- ರಾಜ್ಯ ಸರ್ಕಾರದಿಂದ ತೊಗರಿ ಬೆಳೆಗಾರರಿಗೆ ಉತ್ತೇಜನ ನೀಡಲು ಯಾವುದೇ ವಿಶೇಷ ಯೋಜನೆ ಘೋಷಣೆ ಮಾಡುವ ಚಿಂತನೆ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಪ್ರಸಕ್ತ ವರ್ಷ ತೊಗರಿ ಬೆಳೆಯಲ್ಲಿ ಕ್ಷೇತ್ರ ವಿಸ್ತರಣೆ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಒತ್ತು ನೀಡಿದ್ದು, ಕೇಂದ್ರ ಪುರಸ್ಕöÈತ
ಯೋಜನೆಯ ದ್ವಿದಳ ಧಾನ್ಯ ಕಾರ್ಯಕ್ರಮದಡಿ ವಿವಿಧ ಸೌಲಭ್ಯಗಳನ್ನು ಶೇ.50 ಸಹಾಯಧನದಲ್ಲಿ ರೈತರಿಗೆ ನೀಡಲಾಗುತ್ತಿದೆ.
ತೊಗರಿ ಉತ್ಪಾದನೆಗೆ ರಾಜ್ಯದಲ್ಲಿ ಮುಖ್ಯ ಬೆಳೆಯಾಗಿ, ಅಂತರ ಬೆಳೆಯಾಗಿ ಬೆಳೆಯಲು ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ನೂತನ ತಳಿಗಳ ಕಿರು ಚೀಲಗಳನ್ನು ರೈತರಿಗೆ ನೀಡಲಾಗುತ್ತಿದೆ. ರೈತರಿಗೆ ತರಬೇತಿ, ಕ್ಷೇತ್ರೋತ್ಸವ ನಡೆಸಲಾಗುತ್ತಿದೆ. ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ದೊರಕಿದ್ದು, ಇದರಿಂದ ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಬೆಲೆ ಬರಲಿದೆ. ಉತ್ತಮ ಬೆಲೆ ಪಡೆಯುವುದು ಸೇರಿ ಇತರೆ ಅನುಕೂಲಗಳಿವೆ ಎಂದು ಉತ್ತರಿಸಿದ್ದಾರೆ.