ಮಕ್ತಂಪುರ: ಲಾರ್ವಾ ಸಮೀಕ್ಷೆಗೆ ಸಿಇಒ ಚಾಲನೆ
ಕಲಬುರಗಿ,ಜು.26-ನಗರದ ಮಕ್ತಂಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳಲ್ಲಿ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಅವರು ಡೆಂಗ್ಯೂ ನಿಯಂತ್ರಣಾ ಚಟುವಟಿಕೆಯ ಲಾರ್ವಾ ಸಮೀಕ್ಷೆಗೆ ಚಾಲನೆ ನೀಡಿದರು.
ಬಡಾವಣೆಯ ಮನೆ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರೂ ನೀರು ಸಂಗ್ರಿಹಿಸಿದ ತಾಣಗಳನ್ನು ವೀಕ್ಷಿಸಿ ಪ್ರತಿ ಶುಕ್ರವಾರ ಸಂಗ್ರಹಿಸಿದ ನೀರು ತಾಣಗಳನ್ನು ಸ್ವಚ್ಛ ಗೊಳಿಸಿಕೊಳ್ಳಲು ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಡಿ.ಹೆಚ್.ಓ. ಡಾ.ರತಿಕಾಂತ ಸ್ವಾಮಿ, ಡಾ.ರೇಣುಕಾ ಕಟ್ಟಿ, ಪ್ರಭಾರಿ ಆರೋಗ್ಯ ಮೇಲ್ವಿಚಾರಕ ಸಂತೋಷ ಮುಳಜೆ, ಜಿಲ್ಲಾ ವಿಬಿಡಿ ಸಲಹೆಗಾರ ಕಾರ್ಣಿಕ ಕೋರೆ ಹಾಗೂ ಆರೋಗ್ಯ ಸಿಬ್ಬಂದಿ ವರ್ಗ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಭಾಗವಹಿಸಿದ್ದರು.