ಸಂಗೀತ ತವರು ಗದಗ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಸಂಗೀತ ಪರೀಕ್ಷೆ ನಡೆಸಿ
ಕಲಬುರಗಿ,ಜು.26-ಸಂಗೀತ ತವರು ಗದಗ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ವಿಶೇಷ ಸಂಗೀತ ತಾಳವಾದ್ಯ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಅಂಧ, ವಿಲಚೇತನ, ಅನಾಥÀ ವಿದ್ಯಾರ್ಥಿಗಳು ಗುರುವಾರ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಕರ್ನಾಟಕದ ಸಂಗೀತ ಕ್ಷೇತ್ರದ ತವರು ಎಂಬ ಹೆಗ್ಗಳಿಕೆ ಪಾತ್ರವಾಗಿ ಇತಿಹಾಸ ನಿರ್ಮಿತವಾದದ್ದು ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ದುರುದೃಷ್ಟಿ ಫಲದಿಂದ. ನಾಡಿನ ಅಂಧ, ಅನಾಥ, ವಿಕಲಚೇತನ ಮಕ್ಕಳಿಗಾಗಿ ಹಗಲಿರುಳು ಶ್ರಮಿಸಿದ ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಹಾಗೂ ಪದ್ಮಭೂಷಣ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳನ್ನು ಈ ನಾಡಿಗೆ ನೀಡಿದ ಒಂದು ಶತಮಾನಕ್ಕೂ ಅಧಿಕ ಇತಿಹಾಸವಿರುವ ಗದುಗಿನ ಸಂಗೀತ ಗುರುಕುಲ ಆಶ್ರಮ ವಿರೇಶ್ವರ ಪುಣ್ಯಾಶ್ರಮ ಅಂಧ, ಅನಾಥರಿಗೆ, ವಿಕಲಚೇತನರಿಗೆ, ನಿರ್ಗತಿಕರಿಗೆ ಉಚಿತ ಊಟ ವಸತಿ ವಸ್ತç ಜೋತೆಗೆ ಸಂಗೀತ ವಿದ್ಯೆ ನೀಡಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಿದೆ. ವೀರೇಶ್ವರ ಪುಣ್ಯಾಶ್ರಮ ಸಂಗೀತ ಸಾಹಿತ್ಯ ರಂಗಭೂಮಿ ಈ ಮೂರು ಕ್ಷೇತ್ರಗಳಿಗೆ ಸಾವಿರಾರು ಮಕ್ಕಳನ್ನು ವಿದ್ವಾಂಸರನ್ನಾಗಿ ಮಾಡಿ ನಾಡಿಗೆ ನೀಡಿ ಸಾಂಸ್ಕೃತಿಕ ಲೋಕವನ್ನು ಶ್ರೀಮಂತ ಗೊಳಿಸಿದೆ. ಪ್ರಾರಂಭದಲ್ಲೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ರಾಜ್ಯಮಟ್ಟದ ವಿಶೇಷ ಸಂಗೀತ ನೃತ್ಯ ತಾಳವಾದ್ಯ ಪರೀಕ್ಷೆಗಳನ್ನು ಗದಗ ಮತ್ತು ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರವನ್ನು ನೀಡಿ ಇಲ್ಲಿವರೆಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸುತ್ತ ಬಂದಿದ್ದಾರೆ. ಈ ವರ್ಷದಿಂದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ರಾಜ್ಯದ ಸುಮಾರು 18 ಜಿಲ್ಲಾ ಕೇಂದ್ರಗಳಲ್ಲಿ ಸಂಗೀತ ಪರೀಕ್ಷೆ ನಡೆಸಲು ತಯಾರಿಯಾಗಿದೆ. ಆದರೆ ಗದಗಿಗೆ ಮಾತ್ರ ಪರೀಕ್ಷಾ ಕೇಂದ್ರವನ್ನು ನೀಡದಿರುವುದು ಸಂಗೀತ ಕ್ಷೇತ್ರಕ್ಕೆ ಮಾಡಿದ ಅವಮಾನವಾಗಿದೆ. ಗದಗಿನ ಕೇಂದ್ರದಿAದ ನೂರಾರು ಅಂಧರು, ವಿಕಲಚೇತನರು, ನಿರ್ಗತಿಕ ವಿದ್ಯಾರ್ಥಿಗಳು ಬೇರೆ ಜಿಲ್ಲಾ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯುವುದು ಅಸಾಧ್ಯವಾಗಿದೆ. ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಿ ಆದಷ್ಟು ಬೇಗನೆ ಗದಗ ನಗರದಲ್ಲಿ ಪರೀಕ್ಷಾ ಕೇಂದ್ರ ನಡೆಸುವಂತೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಡಾ.ಕಲ್ಲಯ್ಯಜ್ಜನವರು ಆಗ್ರಹಿಸಿದರು. ಜೊತೆಗೆ ಕಲಬುರಗಿ ಜಿಲ್ಲೆಯಲ್ಲಿ ವಿದ್ವಾ ಪೂರ್ವ, ವಿದ್ವತ್ ಅಂತಿಮ ಪರೀಕ್ಷೆಗಳನ್ನು ನಡೆಸಬೇಕೆಂದು ಸಂಗೀತ ಪದವೀಧರರಾದ ರಘುನಂದನ ಶಾಸ್ತ್ರಿ ಅರಳಗುಂಡಗಿ, ಶಿಚಲಕುಮಾರ ಸಾಲಿಮಠ, ಮಹಾಂತೇಶ ನರಿಬೋಳ, ಬಾಗೇಶ್ ರಾಣಾಪುರ, ಮಲ್ಲಿಕಾರ್ಜುನ ಕೆರಕನಹಳ್ಳಿ, ಬಾಲಾಜಿ ಕಟ್ಟಿಸಂಗಾವಿ,ಕಾಳೇಶ ಮಲಗಾಣ, ತೋಟೇಂದ್ರ ಕರಡಕಲ್ ಒತ್ತಾಯಿಸಿದರು ಎಂದು ನವ ಕರ್ನಾಟಕ ಸಂಗೀತ ಪದವೀಧರ ಸಂಘದ ರಾಜ್ಯಾಧ್ಯಕ್ಷರಾದ ಬಂಡಯ್ಯ ಹಿರೇಮಠ ಸುಂಟನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.