ಹಡಗಲಿ: ಬಸ್ಸಿಗಾಗಿ ಆಗ್ರಹಿಸಿ ಹೆದ್ದಾರಿ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ವಿಜಯಪುರ,ಜು.26:ಶಾಲಾ ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಡಗಲಿ ಗ್ರಾಮದ ಬಳಿ
ರಾಷ್ಟ್ರೀಯ ಹೆದ್ದಾರಿ- 50 ತಡೆದು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶಾಲಾ ಕಾಲೇಜುಗಳಿಗೆ ತೆರಳಲು ಬಸ್ ಇಲ್ಲದೆ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಆಗುತ್ತಿದೆ. ಸಮಯದ ಸರಿಯಾಗಿ ಬಸ್ ಬರದೇ ವಿದ್ಯಾರ್ಥಿಗಳು ಕ್ಲಾಸ್ ಗಳನ್ನು ತಪ್ಪಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ತಡೆ ನಡೆಸಿದರು.
ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದರು.
ಕಳೆದ ಎರಡು ಗಂಟೆಗಳಿAದ ಎನ್ ಎಚ್50 ಬಂದ್ ಮಾಡಿ ಹೋರಾಟ ಮಾಡಲಾಯಿತು. ವಾಹನಗಳು ಎರಡು ಗಂಟೆ ಕಾಲ ರಸ್ತೆಯಲ್ಲಿ ನಿಂತುಕೊAಡಿದ್ದವು. ಪ್ರಯಾಣಿಕರು ಪರದಾಡುವಂತಾಯಿತು.
ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಮನವೋಲಿಕೆಗೆ ಯತ್ನ ನಡೆಸಿದರು.
ಅನಂತರ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಾದ ಬಳಿಕ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.