ಬಸವನ ಬಾಗೇವಾಡಿಯಲ್ಲೂ ಜೆಸಿಬಿ ಸದ್ದು
ವಿಜಯಪುರ,ಜು.26:ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಸ್ತೆ ಬದಿ ಗೂಡಂಗಡಿಗಳ ಕಾರ್ಯಾಚರಣೆ ಶುಕ್ರವಾರ ಬೆಳಂಬೆಳಗ್ಗೆ ನಡೆಯಿತು.
ಪಟ್ಟಣದ ರಸ್ತೆಗಳ ಮೇಲೆ ಹಾಗೂ ಫುಟ್ ಪಾತ್ ಮೇಲೆ ಅಕ್ರಮವಾಗಿ ತಲೆಯೆತ್ತಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಬಸವನ ಬಾಗೇವಾಡಿ ಪುರಸಭೆಯ ಅಧಿಕಾರಿ ಹುಚ್ಚೇಶ ಚಿತ್ತರಗಿ,
ಹೆಲ್ತ್ ಇನ್ಸ್ಪೆಕ್ಟರ್ ಮಹೇಶ ಹಿರೇಮಠ ನೇತೃತ್ವದಲ್ಲಿ ನಡೆಯಿತು.
ಮುನ್ಸೂಚನೆ ನೀಡದೆ ಗೂಡಂಗಡಿಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೂ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದರು.
ಆಗ ಗೂಡಂಗಡಿಕಾರರು ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದೇವೆ.
ಏಕಾಏಕಿ ನಮ್ಮ ಗೂಡಂಗಡಿ ಒಡೆದು ಹಾಕಿ ತೆರವು ಮಾಡಿದರೆ ನಮ್ಮ ಪಾಡೇನು? ಎಂದು ತಮ್ಮ ಅಳಲು ತೋಡಿಕೊಂಡರು.
ಗೂಡAಗಡಿಗಳ ವ್ಯಾಪಾರಸ್ಥರ ಗೋಳು ಕೇಳದ ಅಧಿಕಾರಿಗಳ ನಡೆಯನ್ನು ಖಂಡಿಸಿ
ಪುರಸಭೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ವ್ಯಾಪಾರಸ್ಥರ ಪ್ರತಿರೋಧದ ಮಧ್ಯೆಯೂ ಅತಿಕ್ರಮಣ ಕಾರ್ಯಾಚರಣೆ ಮುಂದುವರೆಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸವನ ಬಾಗೇವಾಡಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.