9.40 ಲಕ್ಷ ರೂಪಾಯಿ ಮೌಲ್ಯದ 11 ಬೈಕ್ ಜಪ್ತಿ.ಮೂವರ ಬಂಧನ
ಚಿಟಗುಪ್ಪ :ಜು.26: ತಾಲೂಕಿನ ಬೇಮಳಖೇಡ ಪೊಲೀಸರು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳವು ಮಾಡಲಾಗಿದ್ದ ಅಂದಾಜು 9.40 ಲಕ್ಷ ರೂಪಾಯಿ ಮೌಲ್ಯದ 11 ಬೈಕ್ ಗಳನ್ನು ಆರೋಪಿಗಳನ್ನು ಬಂಧಿಸುವದಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಕರುಕ್ನಳ್ಳಿ ಗ್ರಾಮದ ಬಳಿ ಇಬ್ಬರು ವ್ಯಕ್ತಿಗಳು ಎರಡು ಬೈಕ್ಗಳಲ್ಲಿ ಸಂಶಯಸದವಾಗಿ ಹೊರಟಿದ್ದಾಗ ಅನುಮಾನಗೊಂಡು ಬೇಮಳಖೇಡ ಪೊಲೀಸರು ಅವರನ್ನು ತಡೆದು ವಿಚಾರಿಸಿದಾಗ ಸಮಪ್ರಕ ಉತ್ತರ ನೀಡಿದ ಕಾರಣ ಠಾಣೆಗೆ ತಂದು ವಿಚಾರಣೆ ನಡೆಸಿದಾಗ ಬೈಕ ಕಳ್ಳವು ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಜಿಲ್ಲೆ ವಿವಿಧ ಠಾಣಾ ವ್ಯಾಪ್ತಿಯ ಪಟ್ಟಣ ಗ್ರಾಮಗಳು ಹಾಗೂ ತೆಲಂಗಾಣದ ಜಹೇರಾಬಾದ್ ನಲ್ಲಿ ಬೈಕ್ ಕಳ್ಳವು ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದೆ. ಆರೋಪಿಗಳು ಬಸವ ಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದವರಾಗಿದ್ದು ರಾತ್ರಿ ಹೊತ್ತಲ್ಲಿ ಮನೆಯ ಮುಂದೆ ನಿಲ್ಲಿಸಿದ ಬೈಕ್ಗಳ ಹೆಂಡಲ್ ಮುರಿದು ಬಳಿಕ ನಕಲಿ ಕೀಲಿ ಕೈ ಬಳಸಿ ಕಳ್ಳವು ಮಾಡುತ್ತಿದ್ದು ಬಂದಿದ್ದರಲ್ಲಿ ಪ್ರಮುಖ ನಾದ ರೇವಣಸಿದ್ಧ. ಎಂಬ ಆರೋಪಿಯ ಮೇಲೆ ಈಗಾಗಲೇ ಜಿಲ್ಲೆ ವಿವಿಧ ಠಾಣೆಗಳಲ್ಲಿ ಸುಮಾರು 11 ಬೈಕಲ್ಲು ಪ್ರಕರಣಗಳು ದಾಖಲಾಗಿದ್ದು ಪೊಲೀಸರು ಬೇಕಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಸಿಬ್ಬಂದಿಗಳಾದ ವಿಜಯಕುಮಾರ್ ಬರ್ಮ.ಮಾಣಿಕ್ ಸಿದ್ದಾರೋಡ್. ಲಕ್ಷ್ಮಿಕಾಂತ್. ಅಂಬರೀಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಗಳು ಬಹುಮಾನ ನೀಡಿದ್ದಾರೆ.