ಆರ್ಯುವೇದ ಮತ್ತು ಔಷಧಿ ಸಸ್ಯಗಳು ಉಪನ್ಯಾಸ
ಬೀದರ :ಜು.26: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಆರ್ಯುವೇದ ಮತ್ತು ಔಷಧಿ ಸಸ್ಯಗಳ ಕುರಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎನ್.ಕೆ. ಜಾಬಶೇಟ್ಟಿ ಆರ್ಯುವೇದ ಕಾಲೇಜಿನ ಡಾ. ಧೂಳಪ್ಪನವರು ಮಾತನಾಡುತ್ತಾ ಇವತ್ತಿನ ಮಾನಸಿಕ ಜನನೀಬಿಡ ಒತ್ತಡದಿಂದ ಕೆಲಸದಲ್ಲಿ ಮಾನವನು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ ಇದರ ನಿವಾರಣೆ ಕೇವಲ ಆರ್ಯುವೇದ ಔಷಧಗಳಲ್ಲಿ ಮಾತ್ರ ಪರಿಹಾರವಿದೆ ಪ್ರಾಚೀನ ಕಾಲದಲ್ಲಿ ಚರಕ ಮತ್ತು ಶೂಸೃತ ಇವರು ರಚನೆ ಮಾಡಿದ ಗ್ರಂಥದಲ್ಲಿ ಇವತ್ತಿನ ಮಾರಕ ರೋಗಗಳಿಗೆ ದಿವ್ಯ ಔಷಧಿಗಳಿವೆ ಪತಂಜಲಿಯ ಮಹಾಭಾಷ್ಯಾ ಕೃತಿಯಲ್ಲಿ ಸರ್ವರೋಗಗಳಿಗೆ ಆರ್ಯುವೇದವೇ ಜೀವಾಳ ಆದ್ದರಿಂದ ವಿದ್ಯಾರ್ಥಿಗಳು ಔಷಧಿ ಸಸ್ಯಗಳು ಬೆಳೆಸುವುದು ಕುರಿತು ಹಾಗೂ ಅವುಗಳು ಔಷಧಿ ಗುಣಗಳ ತಿಳಿದುಕೊಳ್ಳಬೇಕು.
ಇನ್ನೋರ್ವ ಅತಿಥಿಗಳಾದ ಶ್ರೀಮತಿ ಶೈಲಜಾ ಚೆನ್ನಶೆಟ್ಟಿಯವರು ಮಾತನಾಡುತ್ತಾ ಇಂದು ಹಲವಾರು ರೋಗಗಳಿಗೆ ಅಶುಚಿತ್ವ ಕಾರಣ ಆದ್ದರಿಂದ ತಮ್ಮ ಮನೆ ಸುತ್ತಮುತ್ತಾ ಮತ್ತು ಗ್ರಾಮಗಳಲ್ಲಿ ಶಿಬಿರಾರ್ಥಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಇದರಿಂದ ಡೆಂಗ್ಯೂ, ಮಲೇರಿಯಾ ರೋಗಗಳು ತಡೆಗಟ್ಟಬಹುದು ಹಸಿರೆ ಉಸಿರು ಪರಿಸರ ಕಾಪಾಡುವುದರ ಮೂಲಕ ಸುಂದರ ಜೀವನ ನಡೆಸಲು ಸಾಧ್ಯವೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಮರಗೀಡಗಳ ಜೊತೆಗೆ ಔ಼ಷಧಿ ಸಸ್ಯಗಳನ್ನು ಬೆಳೆಸುವುದು ಇಂದು ಅನಿವಾರ್ಯವಾಗಿದೆ. ಅಡಿಗೆ ಮನೆಯೇ ಔಷಧಾಲಯ ಅಲ್ಲಿ ಸಿಗುವ ಹಲವಾರು ದಿನಬಳಕೆಯ ವಸ್ತುಗಳೇ ನಮಗೆ ಔಷಧಿಗಳಾಗಿ ಪರಿಣಮಿಸಿವೆ. ಆದ್ದರಿಂದ ಎಲ್ಲಾ ಶಿಬಿರಾರ್ಥಿಗಳು ತಮ್ಮ ಗ್ರಾಮ ಮತ್ತು ಜಿಲ್ಲೆಯ ಹಲವಾರು ಗ್ರಾಮಗಳಿಗೆ ತೆರಳಿ ಹಿತ್ತಲ ಔ಼ಷಧಿಗಳ ಗೀಡಗಳ ಬಗ್ಗೆ ಮಾಹಿತಿ ನೀಡಬೇಕೆಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಗೌರವ ಉಪಸ್ಥಿತಿ ಶ್ರೀಮತಿ ನಾಗೇಶ್ವರಿ ಸ್ವಾಮಿ ಹಾಗೂ ಡಾ: ಚೆನ್ನಬಸವಣ್ಣ ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ದೀಪಾ ರಾಗ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಕು: ದೇವಿಕಾ ಪ್ರಾರ್ಥನೆ ಗೀತೆ ಹಾಡಿದರೆ, ಎನ್.ಎಸ್.ಎಸ್. ‘ಬ’ ಘಟಕದ ಅಧಿಕಾರಿಗಳಾದ ಶ್ರೀ ಬಸವರಾಜ ಬಿರಾದಾರ ಸ್ವಾಗತಿಸಿದರೆ, ಶ್ರೀಮತಿ ಶೈಲಜಾ ಸಿದ್ಧವೀರ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳು ಹಾಗೂ ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.