ಪ್ರಯತ್ನ, ಪರಿಶ್ರಮದ ಹಿಂದೆ ಗುರುವಿನ ಅನುಗ್ರಹ ಇದೆ: ಗುಡಿ
ವಿಜಯಪುರ,ಜು.26:ಪ್ರತಿಯೊಬ್ಬ ವ್ಯಕ್ತಿಯ ಯಶಸ್ವಿಯಲ್ಲಿ ಪ್ರಯತ್ನ ಪರಿಶ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಆ ಪ್ರಯತ್ನ ಪರಿಶ್ರಮದ ಹಿಂದೆ ಗುರುವಿನ ಮಾರ್ಗದರ್ಶನ ಇದ್ದರೆ ಸಾಧನೆ ಸಾಧ್ಯ. ಗುರುವಿನ ಮೇಲೆ ಗೌರವ ಭಕ್ತಿ, ಇದ್ದರೆ ಭವ ಬಂಧನದಿAದ ಮುಕ್ತಿ ಸಾಧ್ಯ ಎಂದು ಸಾಹಿತಿ ಶಿಕ್ಷಕ ಡಾ. ಮಾಧವ ಗುಡಿ ಹೇಳಿದರು.
ನಗರದ ಶ್ರೀ ಗುರು ಸುಧೀಂದ್ರ ಭಜನಾ ಮಂಡಳಿಯು ಡಾ. ರಾಜಕುಮಾರ ಲೇಔಟ್‌ನಲ್ಲಿ ಹಮ್ಮಿಕೊಂಡ ಗುರುಪೌರ್ಣಿಮೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪವಿತ್ರ ಸ್ಥಾನವಿದೆ. ವ್ಯಕ್ತಿಯ ಜೀವನದ ಪ್ರತಿ ಹಂತದಲ್ಲೂ ಗುರುವಿನ ಮಾರ್ಗದರ್ಶನ ಇದ್ದೆ ಇರುತ್ತದೆ. ತಂದೆ, ಶಿಕ್ಷಕ, ಹಿರಿಯರಲ್ಲಿ, ಸಾಧು ಸಂತರಲ್ಲಿ ಗುರುವನ್ನು ಕಾಣುವ ಏಕೈಕ ದೇಶ ನಮ್ಮದು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್. ಕುಲಕರ್ಣಿ ಮಾತನಾಡಿ, ಭಾವವೇಶ ನಿವಾರಿಸುವವನೇ ಗುರು. ವಿದ್ಯಾರಣ್ಯ, ಗುರುದೇವ ರಾನಡೆರಂಥ ಶ್ರೇಷ್ಠ ಗುರುಗಳನ್ನು ನೀಡಿದ ನಾಡು ನಮ್ಮದು, ಸಹನೆ, ತಾಳ್ಮೆ, ಸಮರ್ಪಣ ಭಾವವುಳ್ಳವನೇ ಗುರು. ನಮ್ಮ ಬದುಕಿಗೆ ಮಾರ್ಗದರ್ಶನ ನೀಡುವ ಯಾವನೇ ವ್ಯಕ್ತಿಯೂ ನಮಗೆ ಗುರು ಸಮಾನನು ಎಂದರು.
ಗುರು ಪೌರ್ಣಿಮೆ ನಿಮಿತ್ತ ರಾಯರ ಭಕ್ತ ಸಚ್ಚಿದಾನಂದ ಮಾನಕರ ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು. ಸುಧೀಂದ್ರ ಭಜನಾ ಮಂಡಳಿ ಸದಸ್ಯರಿಂದ ಗುರುಭಕ್ತಿ ಸಾರುವ ಹಾಡುಗಳನ್ನು ಹಾಡಿದರು.
ಭಜನಾ ಮಂಡಳಿ ಸಂಚಾಲಕ ಅಂಬಾದಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಕಲ್ಯಾಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿರಾದಾರ, ಕೃಷ್ಣ ಕುಲಕರ್ಣಿ, ಆನಂದ ಕುಲಕರ್ಣಿ, ಗೋವಿಂದ ದೇಶಪಾಂಡೆ, ಉದಯ ಕುಲಕರ್ಣಿ, ರಾಜು ಕಡಿವಾಳ, ದೇವಿಕಾ ತೋರಗಲ್, ಜ್ಯೋತಿ ಕಡಿವಾಳ, ಗೀತಾ ಕುಲಕರ್ಣಿ, ಸಿಂಹಾಸನಮಠ ಮುಂತಾದವರು ಉಪಸ್ಥಿತರಿದ್ದರು.