ನಿಂಗಪ್ಪ ಸಿಂದಗಿಗೆ ಗೌರವ ಡಾಕ್ಟರೇಟ್
ವಿಜಯಪುರ,ಜು.26: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ಹಾಗೂ ಧಾರವಾಡದ ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾಧ್ಯಕ್ಷÀ ನಿಂಗಪ್ಪ ಸಿಂದಗಿ ಅವರಿಗೆ ತೆಲಗಾಂಣ ರಾಜ್ಯದ ಜಹೀರಾಬಾದನ ಯುನಿವರ್ಸಿಟಿ ಆಫ್ ಟೋಲೋಸಾ ಮ್ಯಾಕ್ಸಿಕೋದವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.
ನಿಂಗಪ್ಪ ಸಿಂದಗಿ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದು, ಇವರನ್ನು ತೆಲಂಗಾಣ ರಾಜ್ಯದ ಜಹೀರಾಬಾದನ ಯುನಿವರ್ಸಿಟಿ ಆಫ್ ಟೋಲೋಸಾ ಮ್ಯಾಕ್ಸಿಕೋದವರು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ.
ಗೌರವ ಡಾಕ್ಟರೇಟ್ ಪದವಿಯನ್ನು ತೆಲಗಾಂಣ ರಾಜ್ಯದ ಜಹೀರಾಬಾದನಲ್ಲಿ 21-07-2024 ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಮೆಕ್ಸಿಕೋ ಕಂಟ್ರಿ ಡೈರೆಕ್ಟರ್ ಕಟ್ಟಾ ಬೊಮ್ಮನ್ ಮತ್ತು ಕರ್ನಾಟಕದ ಕೋ ಆರ್ಡಿನೇಟರ್ ಅಜಿತ ಕಟ್ಟಿಮನಿ ಉಪಸ್ಥಿತರಿದ್ದರು.
ಗೌರವ ಡಾಕ್ಟರೇಟ್ ಪದವಿ ಪಡೆದಿದಕ್ಕೆ ನಿಂಗಪ್ಪ ಸಿಂದಗಿ ಅವರನ್ನು ಕುಟುಂಬದ ವರ್ಗ, ಅಪಾರ ಸ್ನೇಹಿತ ಬಳಗದವರು ಅಭಿನಂದಿಸಿ ಹಾರೈಸಿದ್ದಾರೆ.