ಜ್ಞಾನವನ್ನು ತೋರುವನೇ ಗುರು:ವೇ.ವಸಂತ ಜೋಶಿ
ತಾಳಿಕೋಟೆ:ಜು.26: ಗುರು ಹಾಗೂ ಗೋವಿಂದ ಮುಂದೆಬAದರೂ ಮೊದಲು ಗುರುವಿಗೆ ನಮಿಸಬೇಕು ಎಂದು ಸಂತ ಕಬೀರದಾಸರು ಹೇಳಿದ ಪ್ರಕಾರ ಮಾನವನ ಯಶಸ್ವಿಗೆ ಕಾರಣೀಬೂತರಾಗಬೇಕಾದರೆ ಮುಂದೆ ಗುರಿ ಹಿಂದೆ ಗುರು ಇರಬೇಕೆಂದು ಖ್ಯಾತ ಜ್ಯೋತಿಷ್ಯಶಾಸ್ತç ಪರಿಣಿತ ವೇ.ವಸಂತಬಟ್ ಜೋಶಿ ಅವರು ನುಡಿದರು.
ಗುರುವಾರರಂದು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯವರ ವತಿಯಿಂದ ಆಶ್ರಯ ಬಡಾವಣೆಯಲ್ಲಿ ಏರ್ಪಡಿಸಲಾದ ಗುರುಪೂರ್ಣಿಮಾ ಮಹಾ ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಮಹಾ ಮೂರ್ತಿಗೆ ಮಹಾ ಪೂಜೆಗೈದು ಸನ್ಮಾನ ಸ್ವಿಕರಿಸಿ ಭಜನಾ ಮಂಡಳಿಯವರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಗುರು ಎಂದರೆ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ತೋರುವವನೇ ಗುರು ಆಗಿದ್ದಾನೆ ಗುರುವಿನ ಪೂಜಿಸುವದೇ ನಮ್ಮ ಸನಾಥನ ಧರ್ಮದ್ದಾಗಿದೆ ಇಂತಹ ಶ್ರೇಷ್ಠ ಸ್ಥಾನಮಾನ ಹೊಂದಿದ ಗುರುವಿಗಾಗಿ ಮಿಸಲು ಸ್ಥಾನ ಇಟ್ಟಿದ್ದೇ ಗುರುಪೂರ್ಣಿಮೆಯಾಗಿದೆ ಎಂದರು. ಗುರು ವೇದ ವ್ಯಾಸರು ಜನಿಸಿದ್ದು ಇದೇ ದಿನದಂದು ವೇಧ ಮಂತ್ರಗಳನ್ನು ಪರಿಸ್ಕರಿಸಿ ವಿಂಗಡಿಸಿದ್ದರಿAದ ಅವರಿಗೆ ವೇದ ವ್ಯಾಸರೆಂದು ಕರೆಯುತ್ತಾರೆ ಇವರ ಗೌರವಾರ್ಥವಾಗಿಯೇ ಗುರು ಪೂರ್ಣಿಮೆಗೆ ವ್ಯಾಸ ಪೂರ್ಣಿಮೆ ಎಂದು ಕರೆಯುತ್ತಾರೆಂದರು.
ಇನ್ನೋರ್ವ ಸನ್ಮಾನ ಸ್ವಿಕರಿಸಿದ ವೇ.ತಿರುಪತಿ ಆಚಾರ್ಯ ಗ್ರಾಂಪೊರೊಹಿತ ಅವರು ಮಾತನಾಡಿ ಶಿವಪರಮಾತ್ಮರನ್ನು ಆಧಿಯೋಗಿ ಎಂದು ಕರೆಯಲಾಗುತ್ತದೆ ಭೌಧ ಧರ್ಮ ಸಂಸ್ಥಾಪಕ ಗೌತಮ್ಮ ಬುದ್ದ ಅವರು ಜ್ಞಾನೋದಯವನ್ನು ಗುರುಪೂರ್ಣಿಮೆಯ ದಿನವನ್ನು ನೀಡಿದವರಾಗಿದ್ದಾರೆ ಇದೇ ದಿನದಂದು ಮಹಾವೀರರು ಗುರು ಸ್ಥಾನಕ್ಕೇರಿದ್ದು ಇದೆ ದಿನವಾಗಿದೆ ಹಿಂದೂ-ಭೌಧ-ಜೈನ ಧರ್ಮಿಯರು ಮಹತ್ವದ ಗುರು ಪೂರ್ಣಿಮೆ ಎಂದು ಕರೆಯುತ್ತಾರೆಂದರು.
ಇನ್ನೋರ್ವ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ ಕಮಿಟಿಯ ಮಾಜಿ ಅಧ್ಯಕ್ಷರಾದ ಜಿ.ಜಿ.ಕಾದಳ್ಳಿ ಅವರು ಸನ್ಮಾನ ಸ್ವಿಕರಿಸಿ ಮಾತನಾಡಿ ಅನೇಕ ಆಶ್ರಮ ಗುರುಪೀಠಗಳಲ್ಲಿ ಭಜನೆ ಹೋಮ ಹವನಗಳನ್ನು ಗುರುಪೂರ್ಣಿಮೆಯ ದಿನದಂದು ಏರ್ಪಡಿಸುತ್ತಾರೆ ಹಾಗೆಯೇ ಶಾಲೆ ಕಾಲೇಜುಗಳಲ್ಲಿಯೂ ಆಚರಿಸಲಾಗುತ್ತದೆ ಬ್ರಹ್ಮ-ವಿಷ್ಣು, ಮಹೇಶ್ವರ ಸ್ವರೂಪಿಗಳಾದಂತಹ ಗುರುವಿನ ಮೇಲೆ ನಂಬಿಕೆ ಹಾಗೂ ಭಕ್ತಿ ಇಟ್ಟು ನಡೆದರೆ ಸನ್ಮಾರ್ಗ ದೊರೆಯಲಿದೆ ಎಂದರು.
ಇನ್ನೋರ್ವ ಅನ್ನಪೂರ್ಣಾ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಭೋರಮ್ಮ ಕುಂಭಾರ ಅವರು ಮಾತನಾಡಿ ಹಿಂದೂ ಕ್ಯಾಲೇಂಡರ್ ಪ್ರಕಾರ ಆಷಾಡ ಮಾಸದ ಹುಣ್ಣಿಮೆಯ ದಿನದಂದು ಇದನ್ನು ಆಚರಿಸಲಾಗುತ್ತದೆ ಈ ದಿನವನ್ನು ವ್ಯಾಸ ಪೂರ್ಣಿಮೆ ದಿನವೆಂದು ಕರೆಯುತ್ತಾರೆ ಇದು ವೇಧ ವ್ಯಾಸರ ಜನ್ಮ ದಿನವನ್ನು ಸೂಚಿಸುತ್ತದೆ ಇದು ಗುರುಗಳಿಗೆ ಗೌರವದ ಆಚರಣೆ ಎಂದು ಗುರುತಿಸಲಾಗಿದ್ದು ಗುರು ನಮಗೆ ಕಲಿಸುವದಲ್ಲದೇ ನಮ್ಮ ಜೀವನವನ್ನು ಮುನ್ನಡೆಸಲು ಸರಿಯಾದ ಮಾರ್ಗವನ್ನು ತೋರುತ್ತಾರೆ ಕಾರಣ ಪ್ರತಿ ವರ್ಷ ನಮ್ಮ ಭಜನಾ ಮಂಡಳಿಯವರ ವತಿಯಿಂದ ಸತ್ಯ ಸಾಯಿಬಾಬಾರವರ ಮಹಾ ಪೂಜೆ ಗೈಯುವದಲ್ಲದೇ ಗುರುವಿನ ಸ್ಥಾನಮಾನ ಹೊಂದಿದ ಮಹಾ ದೇವತಾ ದೇವತೆಗಳಿಗೂ ಕಲಿಸಿದ ಗುರುಗಳಿಗೂ ನಮಿಸುವ ಕಾರ್ಯಕ್ರಮ ಇಂದು ಏರ್ಪಡಿಸಲಾಗಿದೆ ಎಂದರು.
ಇನ್ನೋರ್ವ ಸನ್ಮಾನ ಸ್ವಿಕರಿಸಿದ ಅನ್ನಪೂರ್ಣಾ ಭಜನಾ ಮಂಡಳಿಯ ಕಾರ್ಯದರ್ಶಿಯಾದ ಆನಂದ ಕುಲಕರ್ಣಿ ಅವರು ಶಿರಡಿಯಿಂದ ತರಲಾದ ಸತ್ಯ ಸಾಯಿಬಾಬಾರವರ ಮಹಾ ಮೂರ್ತಿಗೆ ಬಿಲವಾರ್ಚನೆ, ಪುಷ್ಪಾರ್ಚನೆ, ಮಹಾ ಕಾರ್ಯಕ್ರಮವನ್ನು ವೇ.ತಿರುಪತಿ ಆಚಾರ್ಯ ಗ್ರಾಂ ಪೊರೊಹಿತ ಅವರೊಂದಿಗೆ ನಡೆಸಿಕೊಟ್ಟರಲ್ಲದೇ ಆಗಮಿಸಿದ ಗುರುವಿನ ಸ್ಥಾನಮಾನದಲ್ಲಿದ್ದಂತಹ ಎಲ್ಲ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಅಮೋಘ ಕುಲಕರ್ಣಿ, ಎಲ್.ವ್ಹಿ.ಮಹೇಂದ್ರಕರ, ಡಿ.ಎಲ್.ಹಂಚಾಟೆ, ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ಕಮಿಟಿಯ ಹಿರಿಯ ಸದಸ್ಯರಾದ ಸತೀಶ ದಪ್ತೇದಾರ, ಕಾಶಿನಾಥ ಪಾಟೀಲ, ಹಾಗೂ ಸಿದ್ದು ನಿಡಗುಂದಿ, ಶಿವಾನಂದ ಸಜ್ಜನ, ಹಾಗೂ ಭಜನಾ ಮಂಡಳಿಯವರಾದ ಶಾರದಾ ಕಸಬೇಗೌಡರ, ಕಾಶಿಬಾಯಿ ಆಲೂರ, ಪದ್ಮಾವತಿ ಹಜೇರಿ, ಕಸ್ತೂರಿಬಾಯಿ ಕುಂಭಾರ, ಮೀನಾಕ್ಷೀ ಕೊಳಕೂರ, ಲಕ್ಷಿö್ಮÃಂಬಾಯಿ ಸಜ್ಜನ, ಯಮನವ್ವ ದನ್ನೂರ ಮೊದಲಾದವರು ಉಪಸ್ಥಿತರಿದ್ದರು.
ಅಮೋಘ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು.