ತುಂತುರು ಮಳೆಯಲ್ಲಿ ಎನ್ ವಿ ಸಂಸ್ಥೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳ ಸಸಿ ನೆಡುವ ಕಾರ್ಯ
ಕಲಬುರಗಿ:ಜು.26:ನೂತನ ವಿದ್ಯಾಲಯ ಸಂಸ್ಥೆ, ನೂತನ ವಿದ್ಯಾಲಯ ವಿಶ್ವಸ್ಥ ಮಂಡಳಿ ಕಲಬುರಗಿ ಹಾಗೂ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನೂತನ ವಿದ್ಯಾಲಯದ ಆಟದ ಮೈದಾನದಲ್ಲಿ “ನಮ್ಮ ನೆಲ, ನಮ್ಮ ಜಲ” ಎಂಬ ಧ್ಯೇಯ ವಾಕ್ಯದ ಮುಖಾಂತರ ನಮ್ಮ ಕಲಬುರಗಿ ಹಸಿರು ಕಲಬುರಗಿ ಮಾಡುವ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.