ಸಿದ್ದಾಂತ ಶಿಖಾಮಣಿ ಅಭಿಯಾನ ವಿನೂತನ ಕ್ರಾಂತಿಕಾರಿ ಹಜ್ಜೆ: ಕಾಶಿ ಜಗದ್ಗುರುಗಳು
ಬೀದರ:ಜು.26:ನಾಡಿನ ಖ್ಯಾತ ಸಂಶೋಧಕ ವಿದ್ವಾಂಸರಾದ ಬೇಮಳಖೇಡ ಹಿರೇಮಠದ ಶ್ರೀ.ಷ.ಬ್ರ ಡಾ|| ರಾಜಶೇಖರ ಶಿವಾಚಾರ್ಯರು ಶ್ರಾವಣ ಶಿವ ಸಂಚಾರ ನಿಮಿತ್ತ ಹಮ್ಮಿಕೊಂಡಿರುವ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನವು ಒಂದು ಹೊಸ ಇತಿಹಾಸವನ್ನು ರಚಿಸಲಿದೆ ಎಂದು ಶ್ರೀ ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯರ ಮಹಾಸ್ವಿಗಳು ಹೇಳಿದರು.
ಅವರು ನೆರೆ ರಾಜ್ಯ ತೆಲಂಗಾಣದ ಸದಾಶಿವಪೇಟದಲ್ಲಿ ನಡೆದ ಕರ‍್ಯಕ್ರಮದಲ್ಲಿ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನ ಮೊದಲು ಪ್ರಕಟಣೆ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜಾಗತಿಕ ಶ್ರೇಷ್ಠ ದಾರ್ಶನಿಕ ಗ್ರಂಥವೆನಿಸಿದ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವು ವೀರಶೈವ ಧರ್ಮಗ್ರಂಥವಾಗಿ ಪ್ರಸಿದ್ಧವಾಗಿದೆ. ವೀರಶೈವ ಆಚರಣೆ ಸಂಸ್ಕೃತಿ ಪ್ರಮುಖ ಮೂರು ಆಧಾರದ ಸ್ತಂಭವಾಗಿ ಅಷ್ಟಾವರಣ ಪಟಸ್ಥಲ ಮತ್ತು ಪಂಚಾಗಗಳ ಮೇಲೆ ನೂರೊಂದು ಸ್ಥಲಗಳಿಂದ ಕೂಡಿದ ವೀರಶೈವ ಧರ್ಮ ಸಂವಿಧಾನ ಗ್ರಂಥ ವೆಂದು ಸುವಿಖ್ಯಾತ ಪಡೆದಿದೆ. ಯುಗ ಪೂರ್ವ ಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಅಗಸ್ತಾö್ಯದಿ ಮನು ಮುನಿಗಳಿಗೆ ಸೂತ್ರರೂಪದಲ್ಲಿ ಬೋಧಿಸಿದ ಶ್ರೇಷ್ಠ ವೀರಶೈವ ಧರ್ಮ ಗ್ರಂಥವಾಗಿದೆ. ಇದು ಪ್ರತಿಯೊಬ್ಬರು ಓದಲೇಬೇಕಾದ ಗ್ರಂಥವಾಗಿದೆ. ನಾವುಗಳು ಕಳೆದ 35 ವರ್ಷಗಳಿಂದ ದೇಶಾದ್ಯಂತ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವೆವು ಸಂಸ್ಕೃತವಲ್ಲದೇ ದೇಶ ವಿದ್ಯಾಶೇಗಳ 25 ಭಾಷೆಗಳಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಅನುವಾದಗೊಂಡಿದೆ.
ನಾಡಿನ ಪ್ರಸಿದ್ಧ ಸಂಶೋದಕ ವಿದ್ವಾಂಸರಾದ ಶ್ರೀ ಷ.ಬ್ರ.ಡಾ|| ರಾಜಶೇಖರ ಶಿವಾಚಾರ್ಯರು ಬರುವ ಶ್ರಾವಣ ಮಾಸದಲ್ಲಿ ಕರ್ನಾಟಕ ಮಹಾರಾಷ್ಟç ಮತ್ತು ತೆಲಂಗಾಣದಲ್ಲಿ 30 ರಿಂದ 41 ಗ್ರಾಮ ಪಟ್ಟಣಗಳಲ್ಲಿ ಶ್ರಾವಣ ಶಿವ ಸಂಚಾರ ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ಹಮ್ಮಿಕೊಂಡಿರುವುದು ನಾಡಿನ ಮಠಾಧೀಶರಿಗೆ ಸಾಧಕರಿಗೆ ಸತ್ಪೆçÃರಣೆ ಯಾಗುವುದು ಎಂದು ಶ್ರೀ ಜಗದ್ಗುರುಗಳು ಶ್ಲಾಘಿಸಿ ಈ ಈ ಸಿದ್ಧಾಂತ ಶಿಖಾಮಣಿ ಅಭಿಯಾವು ಂiÀಶಸ್ವಿಯಾಗಲೇAದು ಆಶೀರ್ವದಿಸಿ ಹರಸಿದರು.
ಇದೇ ಸಂದರ್ಭದಲ್ಲಿ ರಾಜ್ಯದಿಶಾ ಕಮಿಟಿತ ಸದಸ್ಯರಾದ ಶಿವಯ್ಯ ಸ್ವಾಮಿ ಅವರಿಗೆ ಶ್ರೀ ಕಾಶಿ ಜಗದ್ಗರುಗಳು ಗುರುರಕ್ಷೆ ನೀಡಿ ಹರಸಿದರು. ಡಾ|| ಬಂಡಯ್ಯ ಸ್ವಾಮಿ, ಪ್ರಕಾಶ ಪಾಟೀಲ, ಶಂಭುಲಿAಗ ಸ್ವಾಮಿ, ವರದಯ್ಯ ಪ್ರವೀಣ ಸ್ವಾಮಿ, ರೇವಣಸಿದ್ಧಯ್ಯ, ಸಂಜು ಸ್ವಾಮಿ, ಶಿವಕುಮಾರ ಸ್ವಾಮಿ, ರಾಕೇಶ ಸ್ವಾಮಿ ಮುಂತಾದವರಿಗೆ ಶ್ರೀ ಕಾಶಿ ಜಗದ್ಗರುಗಳು ಗುರುರಕ್ಷೆ ನೀಡಿದರು ಈ ಕಾರ್ಯಕ್ರಮದ ಸಂಯೋಜಕರಿಗೆ ಶಿವಯ್ಯ ಸ್ವಾಮಿ ರವರು ಸನ್ಮಾಸಿ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಮತ್ತು ಜಗದ್ಗುರು ಪಂಚಾಚಾರ್ಯರರ ಭಾವ ಚಿತ್ರವನ್ನು ನೀಡಿ ಸನ್ಮಾನಿಸಿದ್ದರು.