ರುದ್ರವಾಡಿಯಲ್ಲಿ ತೋಟಗಾರಿಕೆ ಸಾವಯವ ಬೇಸಾಯ ತರಬೇತಿ
ಆಳಂದ:ಜು.26: ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಮುಂಬೈನ್ ಮಾರ್ಕ್ ಆಗ್ರೀ ಎನೆಟಿಕ್ಸ್ ಆಶ್ರಯದಲ್ಲಿ ಹಮ್ಮಿಕೊಂಡ ತೋಟಗಾರಿಕೆ ಬೆಳೆಗಾರರಿಗೆ ಸಾವಯವ ಬೇಸಾಯ ಕುರಿತು ಒಂದು ದಿನದ ತರಬೇತಿ ನಡೆಯಿತು.
ಖಜೂರಿ ರೈತ ಸಂಪರ್ಕ ಕೇಂದ್ರ ತೋಟಗಾರಿಕೆ ವಲಯ ಅಧಿಕಾರಿ ಸೈಯದ್ ಮುಕ್ತಾದೀರ್ ಅವರು ಮಾತನಾಡಿ, ಬಿಜೋಪಚಾರ ಮತ್ತು ಸಾವೇವ ಪದ್ಧತಿ ಅನುಸಿರುವ ಕ್ರಮ ಸಾವಯವ ಪದ್ಧತಿ ಅನುಕರಣೆಯಿಂದ ಬೆಳೆಗಳಿಗೆ ಹೆಚ್ಚು ರೋಗ ನಿರೋಧಕ ಶಕ್ತಿ ದೊರಕುತ್ತದೆ ಮತ್ತು ಬಾಳಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು. ಸಾವಯವ ಎರೆಹುಳ ಗೊಬ್ಬರದ ಬಳಕೆ ಮಹತ್ವವನ್ನು ಅವರು ವಿವರಿಸಿದರು. ಈ ಗೊಬ್ಬರದ ಬಳಕೆ ರೈತರಿಗೆ ಪರಿಸರಸ್ನೇಹಿ ಹಾಗೂ ದೀರ್ಘಕಾಲೀನ ಬೆಳೆಯ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಜೈವಿಕ ಕೃಷಿ ಬೇಸಾಯದ ಕುರಿತು ಮಾತನಾಡಿ, ಬಿತ್ತನೆ ವೇಳೆ ಬಿಜೋಪರದಲ್ಲಿ ಬೇವಿನ ಎಣ್ಣೆ ಟ್ರಾಯಿಕೋಡರಮಾ ಇನ್ನಿತರ ಸಾಯವ ಬಳಸಬೇಕು ಎಂದು ಅರಿವು ಮೂಡಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾAತ ಖೋಬ್ರೆ ಅವರು ಮಾತನಾಡಿ, ರೈತರ ತರಬೇತಿ ಕಾರ್ಯಕ್ರಮದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ತೋಟಗಾರಿಕೆ ಇಲಾಖೆಯ ಈ ಪ್ರಯತ್ನವು ರೈತರ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಲು ಪ್ರಮುಖ ಪಾತ್ರ ವಹಿಸಲಿದೆ. ಈ ತರಬೇತಿಯಲ್ಲಿ ಭಾಗವಹಿಸಿದ ರೈತರು ತಮ್ಮ ಕೃಷಿಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಈ ಮಾಹಿತಿಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಗತಿಪರ ರೈತ ಆದಿನಾಥ ಹೀರಾ ಸೇರಿದಂತೆ ಅನೇಕರು ಸಾವಯವ ಕೃಷಿ ಕ್ರಮಗಳ ಕುರಿತು ತಿಳಿಯಲು ಆಸಕ್ತಿ ತೋರಿಸಿ ತಮ್ಮ ಅನುಭವ ಹಂಚಿಕೊAಡರು.
ಕಂಪನಿಯ ಅಶೋಕ ಸಿ. ಹರಸೂರ ಪ್ರಾಸ್ತಾವಿಕ ಮಾತನಾಡಿ ತರಬೇತಿ ಉದ್ದೇಶಗಳನ್ನು ಪ್ರಸ್ತಾಪಿಸಿದರು. ರೈತ ಗುಂಡಪ್ಪ ದೊಳಗೊಂಡ, ಸಿದ್ರಾಮಪ್ಪ ಮೂಲಗೆ, ಸುರೇಶ ಮಂಠಾಳೆ, ಶ್ರೀಧರ ಕೊಟ್ಟರಗಿ, ಲಕ್ಷಿö್ಮÃಂಪುತ್ರ ಹಣಮಶೆಟ್ಟಿ ಜಿಡಗಾ, ಗಣಪತಿ ಮೂಲಗೆ, ಶ್ರಾವಣ ಜಮಾದಾರ, ಮಲ್ಲಪ್ಪ ಮೂಲಗೆ ಸೇರಿದಂತೆ ಜಿಡಗಾ, ಬಂಗರಗಾ, ರುದ್ರವಾಡಿ ಗ್ರಾಮಗದ್ ಪ್ರಮುಖ ರೈತರು ಉಪಸ್ಥಿತರಿದ್ದರು.