ದತ್ತಿ ಗೋಷ್ಠಿಗಳು ಸಮಾಜ ಪರಿವರ್ತನೆಗೆ ಪೂರಕ: ಡಾ: ರೇಣುಕಾ ಮೇಟಿ
ವಿಜಯಪುರ,ಜು.26: ದತ್ತಿ ನಿಧಿ ಗೋಷ್ಠಿಗಳು ಸಮಾಜ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಯುವ ಪೀಳಿಗೆ ಸಾಹಿತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವದು ಅತ್ಯಗತ್ಯ, ಈ ನಿಟ್ಟಿನಲ್ಲಿ ಷರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಮಹಿಳಾ ವಿಶ್ವವಿದ್ಯಾಲಯದ ಆಹಾರ ಮತ್ತು ಸಂಸ್ಕರಣ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಮೇಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದತ್ತಿ ನಿಧಿ ಕಾರ್ಯಕ್ರಮದಲ್ಲಿ ದಿ. ಮಳಿಸಿದ್ದಪ್ಪ ಶಿವಪ್ಪ ವಾಲಿ ದತ್ತಿ. ದತ್ತಿ ದಾನಿಗಳು ಡಾ. ಸೋಮಶೇಖರ ವಾಲಿ ಹಾಗೂ ದಿ. ಮಲ್ಲೇಶ್ವರ ಅಶೋಕಕುಮಾರ ಗಂಜಾಳ ದತ್ತಿ. ದತ್ತಿ ದಾನಿಗಳು ಅಶೋಕ ಗಂಜಾಳ ಅವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ನಾವೆಲ್ಲರೂ ಸಂಘಟಿತರಾಗುವ ಮೂಲಕ ಕನ್ನಡ ಭಾಷೆ, ಸಾಹಿತ್ಯವನ್ನು ನವಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡೋಣ ಎಂದರು.
ದಿ. ಮಳಿಸಿದ್ದಪ್ಪ ಶಿವಪ್ಪ ವಾಲಿ ಹಾಗೂ ಸಾರವಾಡ ಯೋಧರ ಸ್ಮರಣೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಸವರಾಜ ರೆಬಿನಾಳ, ಮಳಸಿದ್ದಪ್ಪ ಅವರು ಬಡವರ ಬಗ್ಗೆ ಅಪಾರವಾದ ಪ್ರೀತಿ, ಗೌರವ, ಅನುಕಂಪ, ಸಹಾನುಭೂತಿ ಹೊಂದಿದವರಾಗಿದ್ದು, ಯುವಕರಲ್ಲಿ ಸ್ವಾಗತ ಸ್ವಾತಂತ್ರ‍್ಯ ಹೋರಾಟಗಾರರ ಸ್ಪೂರ್ತಿ ತುಂಬಿದರು. ಸಾರವಾಡದ ಯೋಧರು ದೇಶ ಸೇವೆ ಮಾಡುವ ಮೂಲಕ ಗ್ರಾಮದ ಗೌರವವನ್ನು ಹೆಚ್ಚಿಸಿದ್ದ್ದಾರೆ ಎಂದರು
ಬುದ್ಧಿ ಮಾಂಧ್ಯ ಮಕ್ಕಳ ಬೆಳವಣಿಗೆ ಹಾಗೂ ಪಾಲನೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕೆ. ಸುನಂದ, ಇಂದು ಬುದ್ಧಿಮಾಂದ್ಯ ಮಕ್ಕಳಿಗೆ ಪ್ರೀತಿ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಪಾಲಕರು ಹಾಗೂ ಶಿಕ್ಷಕರು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಚ್.ಎಮ್. ಕಡಕೋಳ ಮಾತನಾಡಿ, ಯೋಧರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ವಿಕಲಚೇತನ ಮಕ್ಕಳು ಸಹ ಸಮಾಜದಲ್ಲಿ ಎಲ್ಲ ಮಕ್ಕಳಂತೆ ಬದುಕುವ ಹಕ್ಕಿದೆ ಎಂದರು.
ಡಾ. ಆನಂದ ಕುಲಕರ್ಣಿ ಸ್ವಾಗತಿಸಿದರು. ಮಮತಾ ಮುಳಸಾವಗಿ ನಿರೂಪಿಸಿದರು. ಡಾ. ಮಾಧವ ಗುಡಿ ವಂದಿಸಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಸಿದ್ದರಾಮಯ್ಯ ಲಕ್ಕುಂಡಿಮಠ, ಡಾ. ಬಸವರಾಜ ಹಡಪದ, ರಾಜೇಸಾಬ ಶಿವನಗುತ್ತಿ, ರಾ.ಶಿ. ವಾಡೇದ, ಲತಾ ಗುಂಡಿ, ಎಸ್.ಎಲ್. ಇಂಗಳೇಶ್ವರ, ಗಂಗಮ್ಮ ರೆಡ್ಡಿ, ಲಕ್ಷ್ಮಿ ಮೋರೆ, ಸಂಗನಬಸವ ಹಳಕಟ್ಟಿ, ಅಲಸಾಬ ಕಡಖೆ, ಮಲಿಕ ಹಳ್ಳೂರ, ಜಿ.ಎಸ್. ಬಳ್ಳೂರ, ಅಹಮ್ಮದ ವಾಲಿಕಾರ, ಅಶೋಕ ಸಿರಗುಪ್ಪಿ, ಪ್ರೊ. ಸಿದ್ದಣ್ಣ ಬೀಡಗೊಂಡ, ಪ್ರೊ. ರಾಜಶೇಖರ ಬೆನಕನಹಳ್ಳಿ, ನಾಥುರಾಮ ಜಾಧವ, ಸಂಗೀತಾ ಮಠಪತಿ, ಸುನಯನಾ ದೇಶಪಾಂಡೆ, ಬಸವರಾಜ ಅಜೂರ. ಕೆ.ಎಸ್. ಹಣಮಾಣಿ, ಟಿ.ಆರ್. ಹಾವಿನಾಳ, ಸಿದ್ರಾಮಪ್ಪ ಜಂಗಮಶೆಟ್ಟಿ, ಪ್ರದೀಪ ನಾಯ್ಕೋಡಿ, ಸುಖದೇವಿ ಅಲಬಾಳಮಠ, ಲಕ್ಷ್ಮಿ ಬಿರಾದಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಬಸವರಾಜ ಹಡಪದ ಮುಂತಾದವರು ಉಪಸ್ಥಿತರಿದ್ದರು.