ಸಂಪೂರ್ಣ ಹಾಳಾದ ರಸ್ತೆ ರಿಪೇರಿಗೆ ಆಗ್ರಹ
ಕಾಳಗಿ.ಜು.26 : ತಾಲೂಕಿನ ಮೋಘಾ, ಪಸ್ತಪೂರ ರೂಮ್ಮನಗುಡ ರಸ್ತೆ ಸಂಪೂರ್ಣ ಹಾಳಗಿದ್ದು. ವಾಹನಗಳ ಸಂಚಾರಕ್ಕೆ ಪ್ರತಿನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಾರೆ. ಈ ರಸ್ತೆಯಲ್ಲಿ ವಾಹನ ನಡೆಸುವ ಚಾಲಕರು ಹಿಡಿ ಶಾಪ ಹಾಕುತ್ತಾರೆ.
ಮೊನ್ನೆ, ನಿನ್ನೆ ಮಳೆಗೆ ರಸ್ತೆ ಎಲ್ಲಾ ಕೆಸರು ಗದ್ದೆಯಂತಾಗಿದ್ದು. ಪಾದಚಾರಿಗಳು ಸಂಚರಿಸಲು ತುಂಬಾ ಕಷ್ಟ ಪಡಬೇಕಾಯಿತು. ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಸಾರ್ವಜನಿಕರು ಇಲಾಖೆ ಆಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದ್ದಾರೆ. ಕೂಡಲೇ ಈ ರಸ್ತೆ ದುರಸ್ತಿ ಕೆಲಸ ಪ್ರಾರಂಭಿಸಿ ಸಾರ್ವಜನಿಕರಿಗೆ ಆನುಕೂಲ ಮಾಡಿಕೊಡುವಂತೆ ಭಾರತೀಯ ದಲಿತ ಪ್ಯಾಂಥರ್ ವಿ. ಒಕ್ಕೂಟ ಜಿಲ್ಲಾ ಅಧ್ಯಕ್ಷ ದಿನೇಶ್ ಮೋಘಾ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.