ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ಬಿಜೆಪಿ ಯುವ ಮೋರ್ಚಾ ಪಂಜಿನ ಮೆರವಣಿಗೆ
ಕಲಬುರಗಿ:ಜು.26:ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧ ಗೆದ್ದು ಇಂದಿಗೆ 25 ವರ್ಷಗಳ ಸಂದ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ನಗರದ ಶಹಬಜಾರ್ ನಿಂದ ಆರಂಭದ ಮೆರವಣಿಗೆ ಶಹಬಜಾರ್ ನಾಕಾದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಡವಿ ಸ್ವಾಮಿ ಕಾರ್ಗಿಲ್ ವಿಜಯೋತ್ಸವ ದೇಶದ ಪ್ರತಿಯೊಬ್ಬ ಭಾರತೀಯನಿಗೂ, ಭಾರತೀಯ ಯೋಧರಿಗೂ ಹೆಮ್ಮೆಯ ಸಂಕೇತವಾಗಿದೆ, ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಶೌರ್ಯವನ್ನು ಮೆರೆದ ಈ ದಿನ ಮುಂದಿನ ಪೀಳಿಗೆಗೆ ಪ್ರೇರಣಯಾಗಿದೆ ದಿನವಾಗಿದೆ ಎಂದು ಹೇಳಿದರು.
ಈ ಹೋರಾಟದಲ್ಲಿ 527ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. 1500 ಕ್ಕೂ ಹೆಚ್ಚು ಸೈನಿಕರು ಶಾಶ್ವತ ಅಂಗವೈಕಲ್ಯರಾಗಿದ್ದು ಅವರ ತ್ಯಾಗ ಬಲಿದಾನ ಸ್ಮರಿಸುತ್ತಾ ಇಂದಿನ ಯುವ ಪೀಳಿಗೆಗೆ ತಲುಪಿಸಲು ಜುಲೈ 26ರನ್ನು ಭಾರತ ಕಾರ್ಗಿಲ್ ವಿಜಯ ದಿವಸ್ ಆಚರಿಸುತ್ತಿದೆ ಎಂದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಚವ್ಹಾಣ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ್ ಮಹಾನಗರ ಪಾಲಿಕೆ ಉಪ ಮೇಯರ್ ಶಿವಾನಂದ ಪಿಸ್ತಿ, ಹಿರಿಯ ಮುಖಂಡ ಸಿದ್ದಾಜಿ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಪಾಟೀಲ್, ಮಹದೇವ ಬೆಳಮಗಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ದಕ್ಷಿಣ ಮಂಡಲ ಅಧ್ಯಕ್ಷ ಶ್ರೀನಿವಾಸ ದೇಸಾಯಿ, ಪಾಲಿಕೆ ಸದಸ್ಯರಾದ ಸಚಿನ್ ಕಡಗಂಚಿ, ಬಸವರಾಜ್ ಮುನೋಳಿ, ಮುಖಂಡರಾದ ಪ್ರೀತಮ್ ಪಾಟೀಲ್, ದಿಗಂಬರ್, ಅಂಬರೀಶ್ ಭೋವಿ, ಸೌರಭ್ ರಂಗದಾಳ್ ಸಚಿನ್ ಬನ್ನಿ, ನಿಜಗುಣ ಯಲಗೋಡ್ ಸೇರಿದಂತೆ ನೂರಾರು ಯುವ ಮೋರ್ಚಾ ಕಾರ್ಯಕರ್ತರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.