ಪೌರ ಕಾರ್ಮಿಕರು ನೈಜ ಕಾಯಕ ಯೋಗಿಗಳು
ಆನೇಕಲ್. ಸೆ. ೨೯- ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯ ಅಮೂಲ್ಯವಾಗಿದೆ ಎಂದು ಚಂದಾಪುರ ಪುರಸಭೆ ಅಧ್ಯಕ್ಷೆ ಶಾರದ ವರದರಾಜ್ ತಿಳಿಸಿದರು.
ಚಂದಾಪುರ ಪುರಸಭೆ ವ್ಯಾಪ್ತಿಯ ಸೂರ್ಯಸಿಟಿ ಮೊದಲನೆ ಹಂತದಲ್ಲಿರುವ ಆಟದ ಮೈದಾನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಚಂದಾಪುರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳಾಗಿದ್ದು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಅನನ್ಯವಾದದ್ದು ಎಂದರು. ಚಂದಾಪುರ ಪುರಸಭೆಯನ್ನು ಸ್ವಚ್ಚ ಹಾಗೂ ಸುಂದರವಾಗಿ ಇಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರು ಸಹ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಜೊತೆಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಂತಹ ಕೆಲಸ ಮಾಡಬೇಕು ನಿಮ್ಮ ಎಲ್ಲಾ ಕಷ್ಠ ಸುಖಗಳಿಗೆ ಚಂದಾಪುರ ಪುರಸಭೆಯ ಆಡಳಿತ ಮಂಡಳಿಯು ಪ್ರಾಮಾಣಿಕವಾಗಿ ಸ್ವಂದಿಸುತ್ತದೆ ಎಂದು ಹೇಳಿದರು.
ವಿಶೇಷವಾಗಿ ಪೌರ ಕಾರ್ಮಿಕರು ಹಾಗೂ ಚಂದಾಪುರ ಪುರಸಭೆಯ ಜನಪ್ರತಿದಿಗಳು. ಅಧಿಕಾರಿಗಳು ಕ್ರೀಡಾಕೂಟದಲ್ಲಿ ಸ್ವರ್ದೇ ಮಾಡಿ ಆಟ ಆಡಿದ್ದು ವಿಶೇಷವಾಗಿತ್ತು.
ಕ್ರೀಡಾಕೂಟದಲ್ಲಿ ಕ್ರಿಕೆಟ್. ಗುಂಡು ಎಸೆತ. ಮ್ಯೂಸಿಕಲ್ ಚೇರ್. ಗೋಣಿಚೀಲ ಓಟ. ಲೆಮೆನ್ ಸ್ಪೂನ್ ಓಟ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಂದಾಪುರ ಪುರಸಭೆ ಉಪಾಧ್ಯಕ್ಷೆ ಮಂಜುಳ. ಮುಖ್ಯಾಧಿಕಾರಿ ಶ್ರೀನಿವಾಸ್. ಪುರಸಭೆ ಸದಸ್ಯರಾದ ಹೀಲಲಿಗೆ ಕೃಷ್ಣಾರೆಡ್ಡಿ. ರಾಕೇಶ್ ರೆಡ್ಡಿ, ಬನಹಳ್ಳಿ ಸೋಮಶೇಖರ್ ರೆಡ್ಡಿ. ರಾಮು, ಬೈರೇಶ್. ಉಮೇಶ್, ಬಾರತಿ ಬಸವರಾಜ್, ಸೌಮ್ಯ ಸುದಾಕರ್. ಶೋಭ ಚರಣ್, ಜ್ಯೋತಿ ಜಗದೀಶಚಾರಿ. ರೇಣುಕಾ ರಾಜಪ್ಪ. ರಾಮಚಂದ್ರ. ಸ್ಥಳೀಯ ಮುಖಂಡರಾದ ಮುತ್ತುಕೇಶವ. ವರದರಾಜ್, ಪುರಸಭೆಯ ಕಿರಿಯ ಅಭಿಯಂತರರು ಆದರ್ಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಮೇಶ್ ರಾಜ್, ಸುನೀಲ್. ವೇಣು, ಪ್ರವೀಣ್, ಅರುಣ್ ಕುಮಾರ್. ಮಂಜುಳ. ರಾದಮ್ಮ. ಮತ್ತು ಪೌರ ಕಾರ್ಮಿಜರು ಹಾಗೂ ವಾಟರ್‌ಮನ್‌ಗಳು ಭಾಗವಹಿಸಿದ್ದರು.