೧೨ನೇ ಶತಮಾನದ ಪ್ರತಿ ಶರಣರು ಮುತ್ತು ರತ್ನ
ವಿಜಯಪುರ.ಸೆ೨೯:೧೨ನೇ ಶತಮಾನದಲ್ಲಿನ ಶರಣರು ಪ್ರತಿಯೊಬ್ಬರು ಒಂದೊಂದು ಮುತ್ತುರತ್ನಗಳಿದ್ದಂತೆ ಇಂತಹ ರತ್ನಗಳಲ್ಲಿ ಮಹಾ ದಿವ್ಯ ರತ್ನ ಬಸವಣ್ಣನವರಾಗಿದ್ದಾರೆಂದು ಧಾರ್ಮಿಕ ಚಿಂತಕರಾದ ವಚನ ಬಳಗದ ಸಿ ಭಾನುಮತಿ ತಿಳಿಸಿದರು.
ಅವರು ಇಲ್ಲಿನ ಬಂಗಲೆ ಮರಿಚೆನ್ನಪ್ಪ ನವರ ಬಡಾವಣೆಯಲ್ಲಿರುವ ಕೀರ್ತಿ ಶೇಷ ಸಿಎಂ ವೀರಣ್ಣನವರ ನಿವಾಸದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂರ ಹನ್ನೊಂದನೆಯ ತಿಂಗಳ ಬೆಳಕು ಮಾಸದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಸವಣ್ಣನವರ ಒಂದು ವಚನ ” ಆರಂಬ ಮಾಡುವೆನು ಗುರು ಪೂಜೆ ಗೆಂದು. ” ಇದರ ವಿಶ್ಲೇಷಣೆ ಮಾಡುತ್ತಾ. ಆರಂಬ ಎಂದರೆ ವ್ಯವಸಾಯ ವನ್ನು ಮಾಡಿ ಬರುವ ಫಲವನ್ನು ಗುರು ಪೂಜೆಗೆ, ಮತ್ತು ವ್ಯವಹಾರ ಮಾಡಿ ಬಂದ ಫಲವನ್ನು ಲಿಂಗ ಪೂಜೆಗೆ ಮತ್ತು ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಿ ಬರುವ ಫಲದಿಂದ ಜಂಗಮರ ಸೇವೆಗಾಗಿ, ದಾಸೋಹಕ್ಕಾಗಿ ಮೀಸಲಿಡುತ್ತೇನೆ. ನಾನು ಯಾವುದೇ ಕೆಲಸ ಮಾಡಿದರು ಫಲ ಕೊಡುವವನು ನೀನು ಕೂಡಲಸಂಗಮದೇವ. ನೀನು ಕೊಟ್ಟಂತಹ ಈ ಸಕಲ ದ್ರವ್ಯಗಳನ್ನು ನಾನು ನಿನ್ನ ವಶಕ್ಕೆ ಕೊಡುತ್ತೇನೆ ಬೇರೆ ಯಾರಿಗೂ ಕೊಡಲು ಸಾಧ್ಯವಿಲ್ಲ. ನೀನು ಕೊಟ್ಟಂತಹ ಈ ಶರೀರವನ್ನು ನಿನ್ನ ವಶಕ್ಕೆ ಕೊಡುತ್ತೇನೆ. ನನ್ನೊಳಗಿರುವ ಕೂಡಲಸಂಗಮದೇವನಿಗೆ ಆತ್ಮಪೂರ್ವಕವಾಗಿ ಎಲ್ಲವನ್ನು ಅರ್ಪಿಸುತ್ತೇನೆ. ಎಲ್ಲರಿಗೂ ನಿನ್ನ ಕೃಪಾ ದೃಷ್ಟಿಯನ್ನು ಬೀರು. ಕೂಡಲಸಂಗಮದೇವ. ಎಂದು ಧಾರ್ಮಿಕ ಚಿಂತಕರು ವಚನ ಬಳಗದ ಸಿ ಭಾನುಮತಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಶಾಲೆಯ ಮುಖ್ಯೋಪಾಧ್ಯಾನಿಯಾದ ಮಂಜುಳಾ ರವರು ತಿಂಗಳು ಬೆಳಕು ಬಗ್ಗೆ ಉಪನ್ಯಾಸ ನೀಡುತ್ತಾ ೧೨ನೇ ಶತಮಾನದಲ್ಲಿ ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ ಎಂದು ಕರೆಯಲಾಗುತ್ತದೆ. ಮಾನವಿಯತೆ. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು.
ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಅನಿಲ್ ಕುಮಾರ್ ವಹಿಸಿ ಮಾತನಾಡುತ್ತಾ ಕವಿ ಸರ್ವಜ್ಞನ ವಚನಗಳು ಸಾಮಾಜಿಕ ಸುಧಾರಣೆಯ,ಜಾತ್ಯಾತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವಂತಹ ವಚನಗಳಾಗಿವೆ. ಸರಳ, ಸಜ್ಜನಿಕೆ ಹಾಗೂ ಆದರ್ಶ ಗುಣಗಳನ್ನು ಹೊಂದಿದ್ದ ಸರ್ವಜ್ಞ ಸುಂದರ ಹಾಗೂ ಆದರ್ಶ ಸಮಾಜ ನಿರ್ಮಿಸಲು ನಿರಂತರವಾಗಿ ಶ್ರಮಿಸಿದ್ದರೆಂದು ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಸಿ.ಬಸಪ್ಪ, ಉಪಾಧ್ಯಕ್ಷರಾದ ಅಂಬಾ ಭವಾನಿ, ಗೌರವ ಕಾರ್ಯದರ್ಶಿಗಳಾದ ಮ ಸುರೇಶ್ ಬಾಬು, ಪಿ.ಚಂದ್ರಪ್ಪ, ಕೃಷ್ಣಪ್ಪ ದಾಸರು, ಜೋಡಿ ತಿಮ್ಮಸಂದ್ರ ರವಿ, ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷರಾದ ಸಿ ಭಾಸ್ಕರ, ಜಿಲ್ಲಾ ಕದಳಿ ಅಧ್ಯಕ್ಷರಾದ ಸ್ವರ್ಣಗೌರಿಮಹಾದೇವ್, ಎಸ್ ಪಿ ಕೃಷ್ಣಾನಂದ, ಬಾಬು ರಾಜೇಂದ್ರ ಪ್ರಸಾದ್ , ಭಾರತಿ ಶಿವಪ್ರಸಾದ್, ಮೀನಾ ಸುರೇಶ್ ಬಾಬು, ರಾಧ ಮನೋಹರ್, ಅರಿವಿನ ಮನೆಯ ತಾಯಂದಿರು ಉಪಸ್ಥಿತರಿದ್ದರು. ಕುಮಾರಿ ಪ್ರಾಜ್ಞಾ ಪ್ರಾರ್ಥನೆ ಮಾಡಿನಿರೂಪಣೆ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.